ಸುಳ್ಯ: ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ದಿನಕರ ಅಡಿಗ ಅವರನ್ನು ವಿಜ್ಞಾನಿ ಅಶ್ವತಿ ಚಂದ್ರಕುಮಾರ್ ಅವರ ನೇತೃತ್ವದ ತಂಡ ಭೇಟಿ ಮಾಡಿ ಸುಳ್ಯ ತಾಲ್ಲೂಕಿನ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಿದ ವಿಚಾರವಾಗಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು.

ಸೆಪ್ಟೆಂಬರ್ ತಿಂಗಳಲ್ಲಿ 5 ತಳಿಯ ಗೇರು ಗಿಡಗಳ ವಿತರಣೆ, ಕೃಷಿಕರಿಂದ ಗೇರು ಹಣ್ಣು ಮತ್ತು ಗೇರು ಬೀಜಗಳ ಖರೀದಿ, ಅವುಗಳಿಂದ ವಿವಿಧ ತಿಂಡಿ ತಯಾರಿಕೆ, ಪಾನೀಯ, ಮೌಲ್ಯವರ್ಧನೆ, ಯಂತ್ರೋಪಕರಣಗಳ ಬಳಕೆ, ತರಬೇತಿ, ಬೆಳೆ ವಿಮೆ, ಕ್ಷೇತ್ರ ವಿಸ್ತರಣೆ ಹೀಗೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

ವಿಜ್ಞಾನಿಗಳಾದ ಅಶ್ವತಿ ಚಂದ್ರಕುಮಾರ್, ಜ್ಯೋತಿ ನಿಶಾದ್, ಮಂಜುನಾಥ್, ವೀಣಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಪಾಜೆಯ ಎನ್ಆರ್ಎಲ್ಎಂ ಸಂಜೀವಿನಿ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.