ಪಿಯು ನಂತರ ಮುಂದೇನು ಮಾರ್ಗದರ್ಶನ 14ಕ್ಕೆ
ಮಂಗಳೂರು: ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ಇದಿನಬ್ಬ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಕರಿಯರ್ ಯಾತ್ರಾದ ಭಾಗವಾಗಿ, ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಿಯುಸಿ ನಂತರ ಮುಂದೇನು’ ಕರಿಯರ್ ಮಾರ್ಗದರ್ಶನ ಶಿಬಿರವನ್ನು ಮಂಗಳೂರಿನ ಟೀಂ ಬಿ-ಹ್ಯೂಮನ್ ಸಂಸ್ಥೆ ಆಯೋಜಿಸಿದೆ.
ಇದೇ 14ರ ಬೆಳಿಗ್ಗೆ 10ಕ್ಕೆ ಝೂಮ್ (ಮೀಟಿಂಗ್ ಐಡಿ: 85029107730 ಪಾಸ್‌ಕೋಡ್: 687283) ಮೂಲಕ ನಡೆಯಲಿರುವ ಶಿಬಿರದಲ್ಲಿ ಕರಿಯರ್ ಪ್ಲಾನಿಂಗ್ ಮಾಡುವುದು ಯಾಕೆ ಮತ್ತು ಹೇಗೆ ? ಅತ್ಯುತ್ತಮ ಕೋರ್ಸ್ ಆಯ್ಕೆ ಮಾಡುವುದು ಹೇಗೆ ? ಪಿಯುಸಿ ಬಳಿಕ ಲಭ್ಯವಿರುವ ಕೋರ್ಸುಗಳೇನು? ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿಗಳಿಗಿರುವ ಯೋಜನೆಗಳೇನು ? ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು. ಶಿಬಿರಕ್ಕೆ ಪ್ರವೇಶ ಉಚಿತವಾಗಿದೆ.
ಕರಿಯರ್ ಕೌನ್ಸೆಲರ್ ಮಂಗಳೂರಿನ ಉಮರ್ ಯು.ಎಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗೆ 9845054191 ಕರೆ ಮಾಡಬಹುದು ಎಂದು ಟೀಂ ಬಿ-ಹ್ಯೂಮನ್ ಸ್ಥಾಪಕ ಅಧ್ಯಕ್ಷ ಕೆ.ಎಂ. ಆಸಿಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.