ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐ ರೊಬೋಟಿಕ್ಸ್ ವಿಚಾರ ಸಂಕಿರಣ

Last Updated 17 ನವೆಂಬರ್ 2022, 4:24 IST
ಅಕ್ಷರ ಗಾತ್ರ

ಮಂಗಳೂರು: ‘ಎಐ ರೊಬೋಟಿಕ್ಸ್, ಹ್ಯುಮನಾಯ್ಡ್ಸ್, ದಿ ಫ್ಯೂಚರ್ ಆಫ್ ಸೊಸೈಟಿ ಅಂಡ್ ರಿಲಿಜನ್’ ಕುರಿತು ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನ.18ರಿಂದ 20ರವರೆಗೆ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ರಜಿಸ್ಟ್ರಾರ್ ಡಾ. ಆಲ್ವಿನ್ ಡೇಸಾ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,‘ಭಾರತೀಯ ವಿಜ್ಞಾನ ಮತ್ತು ಧರ್ಮ ಸಂಸ್ಥೆಯು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ಮಂಗಳೂರಿನ ಕಥೊಲಿಕ್ ಚೇರ್‌ ಸಹಯೋಗದಲ್ಲಿ ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿದ್ವಾಂಸರ ತಂಡ ಭಾಗವಹಿಸಲಿದೆ. ಅಂದು ಬೆಳಿಗ್ಗೆ 9.30ಕ್ಕೆ ನಡೆಯುವ ವಿಚಾರ ಸಂಕಿರಣದಲ್ಲಿ ಕನ್ಹು ಮುರ್ಮು ವಿಶ್ವವಿದ್ಯಾಲಯದ ಕುಲಪತಿ ಡಾ. ಸೊನಾಝಾರಿಯಾ ಮಿಂಝ್, ಎನ್‌ಐಟಿಕೆ ಪ್ರಾಧ್ಯಾಪಕ ಡಾ. ಆನಂದ್‌ಕುಮಾರ್ ಭಾಗವಹಿಸುವರು. ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಖ್ಯಾಧಿಕಾರಿ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೊ ಅಧ್ಯಕ್ಷತೆ ವಹಿಸುವರು ಎಂದರು.

‘ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಂಬಂಧಿತ ಕ್ಷೇತ್ರಗಳು ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಸಕ್ರಿಯವಾದ ಕೇಂದ್ರಗಳಲ್ಲಿ ಒಂದಾಗಿವೆ. 2020ರ ಅಂದಾಜಿನ ಪ್ರಕಾರ, 37 ದೇಶಗಳಲ್ಲಿ ಕನಿಷ್ಠ 72 ಸಕ್ರಿಯ ಎಐ ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿಯ ಯೋಜನೆಗಳಿವೆ. ಈ ಹೊಸ ಉದ್ಯಮವು ಬಾಹ್ಯಾಕಾಶ ಪರಿಶೋಧನೆ, ಸುಧಾರಿತ ವೈದ್ಯಕೀಯ ಮಧ್ಯಸ್ಥಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಸಂಬಳದೊಂದಿಗೆ ಆಕರ್ಷಕ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು.

ಐಐಎಸ್‌ಆರ್‌ ದೆಹಲಿಯ ಫಾದರ್ ಜೋಬ್ ಕೊಜಂತಡಂ, ಕಾರ್ಯಕ್ರಮ ಸಂಯೋಜಕಿ ಫ್ಲೋನಾ ಸೋನ್ಸ್, ಪಿಆರ್‌ಒ ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT