ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್ ಬೈಜೂಸ್‌: ವಿದ್ಯಾರ್ಥಿನಿಯರಿಗೆ ಉಚಿತ ಕೋಚಿಂಗ್

Last Updated 28 ಸೆಪ್ಟೆಂಬರ್ 2022, 12:54 IST
ಅಕ್ಷರ ಗಾತ್ರ

ಮಂಗಳೂರು: ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಆಕಾಸ್ ಬೈಜೂಸ್ ಕೋಚಿಂಗ್ ಸಂಸ್ಥೆಯು ಈ ಬಾರಿ ನಡೆಸುವ ‘ಆಕಾಶ್ ಬೈಜೂಸ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ’ಯಲ್ಲಿ (ಎಎನ್‌ಟಿಎಚ್‌ಇ– ಅಂತೆ) ಉತ್ತಮ ಸಾಧನೆ ಮಾಡುವ ಸುಮಾರು 2,000 ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಟ್, ಜೆಇಇ ಕೋಚಿಂಗ್ ನೀಡಲು ಮುಂದಾಗಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಪ್ರಮುಖರಾದ ವಿಶ್ವನಾಥ್ ಪಿ.ಜಿ ಅವರು, ‘ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ, ಒಂದೇ ಹೆಣ್ಣು ಮಗು ಅಥವಾ ಓಂಟಿ ಪೋಷಕರನ್ನು ಹೊಂದಿರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಿ ಈ ಅಭಿಯಾನ ನಡೆಸಲು, ಸ್ವಯಂ ಸೇವಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ರಾಷ್ಟ್ರ ಮಟ್ಟದಲ್ಲಿ ನವೆಂಬರ್ 5ರಿಂದ 13ರವರೆಗೆ ದೇಶದಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ‘ಅಂತೆ’ ಪರೀಕ್ಷೆ ನಡೆಯಲಿದೆ. ಭೌತ ವಿಜ್ಞಾನ, ರಾಸಾಯನ ವಿಜ್ಞಾನ, ಗಣಿತ, ಮಾನಸಿಕ ಸಾಮರ್ಥ್ಯ ವಿಷಯಗಳನ್ನು ಒಳಗೊಂಡ 90 ಅಂಕಗಳ ಒಂದು ತಾಸಿನ ಪರೀಕ್ಷೆ ಇದಾಗಿದೆ. ಇದರಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿನಿಯರನ್ನು ಉಚಿತ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ‘ಎಲ್ಲರಿಗೂ ಶಿಕ್ಷಣ’ ಅಭಿಯಾನದ ಜತೆಗೆ ಈ ಯೋಜನೆಯನ್ನು ಈ ವರ್ಷ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಉತ್ತಮ ಅಂಕ ಪಡೆದವರಿಗೆ ಸ್ಕಾಲರ್‌ಷಿಪ್ ಜತೆಗೆ ಐವರಿಗೆ ಪೋಷಕರ ಜತೆ ನಾಸಾಕ್ಕೆ ಉಚಿತ ಪ್ರವಾಸಕ್ಕೆ ಅವಕಾಶವಿದೆ. ಕಳೆದ ವರ್ಷ 7.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಬಾರಿ 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದು ಪ್ರಮುಖರಾದ ಶಾಮ್ ಪ್ರಸಾದ್ ಎಂ ಹೇಳಿದರು.

ಪರೀಕ್ಷೆಗೆ ಪ್ರವೇಶ ಉಚಿತವಾಗಿದ್ದು, anthe.aakash.ac.in ಲಾಗ್‌ಇನ್‌ ಆಗಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಶಾಖೆಯ ವ್ಯವಸ್ಥಾಪಕ ಪರಮೇಶ್ವರ್ ಬೆಹ್ರಾ, ವರುಣ್ ಸೋನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT