ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂತಾರ ಸಿನಿಮಾ ನೋಡಲು ಸ್ನೇಹಿತೆಯೊಂದಿಗೆ ಬಂದಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

Last Updated 8 ಡಿಸೆಂಬರ್ 2022, 14:41 IST
ಅಕ್ಷರ ಗಾತ್ರ

ಸುಳ್ಯ (ದಕ್ಷಿಣ ಕನ್ನಡ): ಇಲ್ಲಿನ ಚಿತ್ರಮಂದಿರದಲ್ಲಿ ಕಾಂತಾರ ತುಳು ಸಿನಿಮಾ ನೋಡಲು ಸ್ನೇಹಿತೆಯೊಂದಿಗೆ ಬಂದಿದ್ದ ವಿದ್ಯಾರ್ಥಿಗೆ ತಂಡವೊಂದು ಥಳಿಸಿರುವ ಸಂಬಂಧ ಸುಳ್ಯ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

‘ಸ್ನೇಹಿತೆ ಜತೆ ಸಿನಿಮಾ ನೋಡಲು ಬಂದಿದ್ದು, 10 ನಿಮಿಷ ಮುಂಚಿತವಾಗಿ ಬಂದಿದ್ದರಿಂದ ಚಿತ್ರಮಂದಿರದ ಕಾಂಪೌಂಡ್ ಬದಿಯಲ್ಲಿ ಬೈಕ್‌ ನಿಲ್ಲಿಸಲು ಹಾಕಿದ್ದ ಶೀಟ್ ಅಡಿಯಲ್ಲಿ ನಿಂತಿದ್ದೆವು. ಆಗ ಗುಂಪಿನಲ್ಲಿ ಬಂದ ಯುವಕರು ಕೈಯಲ್ಲಿ ಕೆನ್ನೆ, ಬೆನ್ನಿಗೆ ಹೊಡೆದು, ಇನ್ನು ಮುಂದೆ ಇಲ್ಲಿ ಬಂದರೆ ಕೊಂದುಬಿಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ಚಿತ್ರಮಂದಿರದವರು ಸ್ಥಳಕ್ಕೆ ಬಂದು ಹೊಡೆಯಂತೆ ತಿಳಿಸಿದ್ದಾರೆ. ನಂತರ ನಾವಿಬ್ಬರೂ ವಾಪಸಾಗಿದ್ದೇವೆ’ ಎಂದು ಬಂಟ್ವಾಳ ತಾಲ್ಲೂಕು ಬಿಮೂಡ ಗ್ರಾಮದ ಕೈಕಂಬ ಮನೆಯ ಮೊಹಮ್ಮದ್ ಇಮ್ತಿಯಾಜ್, ಇ–ಮೇಲ್ ಮೂಲಕ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳಾದ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬೀರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ವಿರುದ್ಧ ಪ್ರಕರಣ ದಾಖಲಾಗಿದೆ. ಸಿನಿಮಾ ನೋಡಲು ಬಂದಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT