ಮಂಗಳೂರು: ಮರೋಳಿಯ ಸೂರ್ಯ ವುಡ್ಸ್‌ನ ವಾಹನ ನಿಲುಗಡೆ ಜಾಗದಲ್ಲಿ ‘ರಂಗ್ ದ ಬರ್ಸ’ ಎಂಬ ಹೋಳಿ ಕಾರ್ಯಕ್ರಮಕ್ಕೆ ಬಜರಂಗ ದಳದವರು ಭಾನುವಾರ ದಾಳಿ ನಡೆಸಿದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿಗಳು ಕಾರ್ಯಕ್ರಮ ಆಯೋಜಕರಿಗೆ ಬೆದರಿಕೆ ಒಡ್ಡಿದ್ದಾರೆ ಹಾಗೂ ಕಾರ್ಯಕ್ರಮಕ್ಕೆ ಬಂದ ಹಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಈ ಬಗ್ಗೆಆಯೋಜಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 7ರ ತನಕ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದೆವು. ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾರೆ ಆರೋಪಿಗಳಾದ ಬಾಲಚಂದ್ರ, ಗಣೇಶ್, ಜಯಪ್ರಶಾಂತ್, ಅಕ್ಷಯ್, ಮಿಥುನ್ ರಾಜ್ ಮತ್ತು ಚಿರಾಗ್ ದಾಳಿ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬನ ಕೈಯಲ್ಲಿ ಮಾರಕಾಯುಧವಿತ್ತು. ವೇದಿಕೆಗೆ ಅಕ್ರಮವಾಗಿ ಪ್ರವೇಶಿಸಿದ ಆತ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದ. ವೇದಿಕೆಯ ಅಲಂಕಾರಿಕ ವಸ್ತುಗಳಿಗೆ ಹಾನಿ ಮಾಡಿದ್ದ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಎಳೆದಾಡಿದ್ದ. ಇದರಿಂದ ಅಂದಾಜು₹ 3 ಲಕ್ಷ ನಷ್ಟ ಉಂಟಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.