ಎರಡೂ ಪಕ್ಷಗಳಿಗೆ ಬಂಡಾಯದ ಬಿಸಿ
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬಂಡಾಯದ ಬಿಸಿಯನ್ನು ಎದುರಿಸುತ್ತಿವೆ. ಗೋಪಲ್ಕೆ ವಾರ್ಡ್‌ನಲ್ಲಿ ಸಿರಾಜ್ ಹುಸೇನ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಿರಾಜ್ ಮೂರು ಅವಧಿಯಲ್ಲಿ ಬಜಪೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಶ್ರೀದೇವಿ ಕಾಲೇಜು ವಾರ್ಡ್‌ನಲ್ಲಿ ಮಳವೂರು–ಕೆಂಜಾರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿಜೆಪಿಯ ಯೋಗೀಶ್ ಆಳ್ವ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.