ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯನ್ನು ಪ್ರೋತ್ಸಾಹಿಸಿ-ಬೆಳೆಸಿ: ಕೆ.ಜಿ.ಬಂಗೇರರ 101 ನೇ ವರ್ಷದ ಹುಟ್ಟು ಹಬ್ಬ

Last Updated 21 ನವೆಂಬರ್ 2022, 5:48 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಕ್ರೀಡೆಯನ್ನು ಪ್ರೋತ್ಸಾಹಿಸುವ ಮನಸ್ಸನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು' ಎಂದು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು.

ಗುರುದೇವ ಎಜುಕೇಷನಲ್ ಟ್ರಸ್ಟ್‌ ಸದಸ್ಯ ಕೆ. ಜಿ.ಬಂಗೇರ ಅವರ 101 ನೇ ಜನ್ಮದಿನದ ಪ್ರಯುಕ್ತ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಬಾಲಕರ ಆಹ್ವಾನಿತ ತಂಡಗಳ ವಾಲಿಬಾಲ್ ಟೂರ್ನಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಸಂತ ಬಂಗೇರ , ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಪೀತಾಂಬರ ಹೇರಾಜೆ ಮಾತನಾಡಿದರು.

ಪ್ರಮುಖರಾದ ಪದ್ಮನಾಭ ಮಾಣಿಂಜ, ಚಿದಾನಂದ ಪೂಜಾರಿ ಎಲ್ದಕ್ಕ, ಪ್ರಕಾಶ್ ಕೋಟ್ಯಾನ್ ಡೊಂಕಬೆಟ್ಟು, ನಿತೀಶ್ ಕೋಟ್ಯಾನ್, ಮನೋಹರ್ ಕುಮಾರ್, ನಾರಾಯಣ ಸುವರ್ಣ, ಭರತ್ ಕುಮಾರ್, ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು ಇದ್ದರು.

ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಧಾಕೃಷ್ಣ ಟಿ, ಅಮಿತಾನಂದ ಹೆಗ್ಡೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಮಚಂದ್ರ ದೊಡ್ಡಮಣಿ, ಗುಣ ಪ್ರಸಾದ್ ಕಾರಂದೂರು, ಯಶೋಧರ ಸುವರ್ಣ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲರಾದ ಡಾ. ಸವಿತಾ, ಉಪ ಪ್ರಾಂಶುಪಾಲ ಶಮೀವುಲ್ಲಾ, ಉಪನ್ಯಾಸಕರಾದ ಗಣೇಶ್ ಶಿರ್ಲಾಲು, ಮಲ್ಲಿಕಾ, ಮಾಯಾ ಭಟ್, ಸವಿತಾ, ಸುಷ್ಮಾ, ಹರೀಶ್ ಪೂಜಾರಿ, ದೀಪಾ ಎಸ್. ಸುವರ್ಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT