ಬಂಟ್ವಾಳ: ಪುರಸಭೆ ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಯತ್ನ
ಬಂಟ್ವಾಳ: ಇಲ್ಲಿನ ಪುರಸಭೆ ಆರೋಗ್ಯಾಧಿಕಾರಿ ರವಿಕೃಷ್ಣ ಪುಣಚ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಪುರಸಭೆಯಲ್ಲಿ ಗುರುವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ತ್ಯಾಜ್ಯ ಸಮಸ್ಯೆಗೆ ಉತ್ತರಿಸಬೇಕಿದ್ದ ಅವರು, ಗೈರಾಗಿದ್ದರು. ಇದೇ ವೇಳೆ ಅವರನ್ನು ಕರೆ ಮಾಡಿ ವಿಚಾರಿಸಿದಾಗ ಪುರಸಭೆ ಅಧ್ಯಕ್ಷರಿಗೆ ಈ ಮಾಹಿತಿ ತಿಳಿದು ಬಂದಿದೆ. ಇಲ್ಲಿನ ಪುರಸಭೆಗೆ ಸುಳ್ಯದಿಂದ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ವರ್ಗವಾಗಿ ಬಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.