ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮದ್ಯದಂಗಡಿ ವಿರುದ್ಧ ಪ್ರಕರಣ

ಮಿತಿಗಿಂತ ಹೆಚ್ಚು ಮಾರಿದ ಆರೋಪ
Last Updated 5 ಮೇ 2020, 16:10 IST
ಅಕ್ಷರ ಗಾತ್ರ

ಮಂಗಳೂರು: ಅಬಕಾರಿ ಕಾಯ್ದೆಯ ಮಿತಿಯನ್ನು ಉಲ್ಲಂಘಿಸಿ ಒಬ್ಬ ವ್ಯಕ್ತಿಗೆ 26.6 ಲೀಟರ್‌ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ನಗರದ ಬಲ್ಮಠದಲ್ಲಿರುವ ರತ್ನಾಸ್‌ ವೈನ್‌ ಗೇಟ್‌ ಮದ್ಯದಂಗಡಿ ವಿರುದ್ಧ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಲಾಕ್‌ಡೌನ್ ಜಾರಿಯಾದ ಬಳಿಕ 41 ದಿನಗಳ ನಿಷೇಧದ ಬಳಿಕ ಸೋಮವಾರ ಮದ್ಯ ಮಾರಾಟ ಆರಂಭವಾಗಿತ್ತು. ಈ ಸಂದರ್ಭದಲ್ಲಿ ರತ್ನಾಸ್‌ ವೈನ್‌ ಗೇಟ್‌ ಮಳಿಗೆಯಲ್ಲಿ ವ್ಯಕ್ತಿಯೊಬ್ಬರು ₹ 59,952 ಮೌಲ್ಯದ 26.64 ಲೀಟರ್‌ ಮದ್ಯ ಖರೀದಿಸಿರುವ ಬಿಲ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

‘ಅಬಕಾರಿ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಗೆ 2.3 ಲೀಟರ್‌ ಭಾರತೀಯ ಉತ್ಪಾದಿತ ಮದ್ಯ (ಐಎಂಎಲ್‌) ಮತ್ತು 18.2 ಲೀಟರ್‌ ಬಿಯರ್‌ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಬಕಾರಿ ಕಾಯ್ದೆ ಮತ್ತು ಪರವಾನಗಿ ಷರತ್ತು ಉಲ್ಲಂಘನೆ ಆರೋಪದ ಮೇಲೆ ರತ್ನಾಸ್‌ ವೈನ್‌ ಗೇಟ್‌ ಮಳಿಗೆ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಶೈಲಜಾ ಎ. ಕೋಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT