ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಲಿಪಿ ಬಿಡುಗಡೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಯತ್ನ
Last Updated 10 ಸೆಪ್ಟೆಂಬರ್ 2020, 15:52 IST
ಅಕ್ಷರ ಗಾತ್ರ

ಮಂಗಳೂರು: ಸುಮಾರು ಸಾವಿರ ವರ್ಷದ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಶುಕ್ರವಾರ ಬಿಡುಗಡೆ ಮಾಡಲಿದೆ.

‘ಬ್ಯಾರಿ ಭಾಷೆಯ ಅಸ್ಮಿತೆ, ಅನನ್ಯತೆ ಹಾಗೂ ಆಧುನಿಕ ತಂತ್ರಜ್ಞಾನ ಮಾದರಿಗಳನ್ನು ಅಳವಡಿಸಿಕೊಂಡು ಸ್ವತಂತ್ರ ಲಿಪಿಯನ್ನು ನೀಡುತ್ತಿದ್ದೇವೆ. ಇದರಲ್ಲಿ ಕಾಗುಣಿತದಿಂದ ಹಿಡಿದು ಎಲ್ಲವೂ ಇರಲಿದೆ. ಇದೊಂದು ಐತಿಹಾಸಿಕ ದಿನ’ ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ತಿಳಿಸಿದರು.

‘ಸುಮಾರು 10 ಬ್ಯಾರಿ ಭಾಷಾ ತಜ್ಞರು ಹೊಸ ಲಿಪಿಯನ್ನು ನೀಡಿದ್ದರು. ಆದರೆ, ಅಕಾಡೆಮಿಯು ಅವರ ಕೊಡುಗೆಗಳನ್ನು ಸ್ವೀಕರಿಸಿಕೊಂಡು, ತಜ್ಞರ ಸಮಿತಿಯನ್ನು ರಚಿಸಿಕೊಂಡು ಹೊಸ ಲಿಪಿಯನ್ನು ಆವಿಷ್ಕರಿಸಿದೆ. ಆ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾರಿ ಲಿಪಿಗೆ ಅಧಿಕೃತ ಮಾನ್ಯತೆ ದೊರೆಯಲಿದೆ. ಇದರಲ್ಲಿ ಎಲ್ಲರ ಕೊಡುಗೆಯೂ ಸೇರಿದೆ’ ಎಂದು ಸ್ಮರಿಸಿದರು.

‘ಲಿಪಿಗೆ ಭಾಷಾ ಮತ್ತು ತಾಂತ್ರಿಕ ಸೇರಿದಂತೆ ಎಲ್ಲ ಮಾನದಂಡಗಳನ್ನೂ ಅನ್ವಯಿಸಿದ್ದೇವೆ. ಅಲ್ಲದೇ, ಬ್ಯಾರಿಯಿಂದ ಕನ್ನಡ ಹಾಗೂ ಇಂಗ್ಲಿಷ್‌ಗೆ ಲಿಪ್ಯಂತರದ ಆ್ಯಪ್‌ ಅನ್ನೂ ಶೀಘ್ರ ಹೊರ ತರುತ್ತೇವೆ. ಇದೆಲ್ಲ ಭಾಷೆಯ ಅಸ್ತಿತ್ವದ ಪ್ರಯತ್ನಗಳೇ ಹೊರತು, ಹೇರಿಕೆ ಅಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT