ಸಾಹಿತಿ ಭಗವಾನ್ ಬೆತ್ತಲೆ ಮೆರವಣಿಗೆಗೆ ಕ್ಷಣಗಣನೆ: ಗಣರಾಜ್ ಭಟ್ ಕೆದಿಲ  

7

ಸಾಹಿತಿ ಭಗವಾನ್ ಬೆತ್ತಲೆ ಮೆರವಣಿಗೆಗೆ ಕ್ಷಣಗಣನೆ: ಗಣರಾಜ್ ಭಟ್ ಕೆದಿಲ  

Published:
Updated:
Prajavani

ಉಳ್ಳಾಲ: ‘ಹಿಂದೂಗಳು ಮನಸ್ಸು ಮಾಡಿ, ರೊಚ್ಚಿಗೆದ್ದದ್ದೇ ಆದಲ್ಲಿ ಆರಾಧ್ಯ ಶ್ರೀರಾಮನನ್ನು ತುಚ್ಛವಾಗಿ ನಿಂದಿಸಿರುವ ಭಗವಾನ್‍ನನ್ನು ಚಡ್ಡಿ ಬಿಚ್ಚಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿಸುವ ಕ್ಷಣಗಣನೆ ಆರಂಭವಾಗಿದೆ' ಎಂದು ಹಿಂದು ಜಾಗರಣಾ ವೇದಿಕೆ ವಿಟ್ಲ ಪ್ರಖಂಡ ಕಾರ್ಯದರ್ಶಿ ಗಣರಾಜ್ ಭಟ್ ಕೆದಿಲ ಹೇಳಿದ್ದಾರೆ.

ಕೋಟೆಕಾರು ಬೀರಿಯಲ್ಲಿ ಶುಕ್ರವಾರ ಹಿಂದೂ ಹಿತರಕ್ಷಣಾ ವೇದಿಕೆ ಉಳ್ಳಾಲ ಹಮ್ಮಿಕೊಂಡ ಹಿಂದೂ ಸಮಾಜದ ಆದರ್ಶ ಪುರುಷ ಶ್ರೀರಾಮ ಪ್ರಭು ಮತ್ತು ಹಿಂದೂ ದೇವತೆಗಳನ್ನು ಅವಹೇಳನ ಮಾಡಿ, ನಿಂದಿಸಿ ಸ್ವಯಂ ಘೋಷಿತ ವಿಚಾರವಾದಿಗಳ ಹಾಗೂ ಇದನ್ನು ಪ್ರೇರೇಪಿಸುವ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡ ಜನಾಕ್ರೋಶ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೂಗಳನ್ನು ಅವಮಾನಿಸುತ್ತಲೇ ಬಂದಿರುವ, ದೇಶದ್ರೋಹದ ಮಾತುಗಳನ್ನು ಆಡುತ್ತಿರುವ ಭಗವಾನ್ ರಕ್ಷಣೆಗೆ ರಾಜ್ಯ ಸರ್ಕಾರ ಲಕ್ಷಾಂತರ ಖರ್ಚು ಮಾಡುತ್ತಲೇ ಬಂದಿದೆ.  ಹಿಂದೂ ಸಮಾಜವನ್ನು ವಿವಿಧ ರೀತಿಯಲ್ಲಿ ದುರ್ಬಲಗೊಳಿಸಲು ಹೊರಟವರ ವಿರುದ್ಧ ಎಚ್ಚರಿಕೆಯ ಪ್ರತಿಭಟನೆ ಇದಾಗಿದೆ. ಇಬ್ಬರು ಮಹಿಳೆಯರನ್ನು ಛೂಬಿಟ್ಟು ಶಬರಿಮಲೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಪಿಣರಾಯಿ ವಿಜಯನ್ ಸರ್ಕಾರದಿಂದ ಹಿಂದೂ ವಿರೋಧಿ ಷಡ್ಯಂತ್ರ’ ಎಂದರು.

‘ಸತ್ಯ ಹೇಳಿದರೆ ಕೋಮುವಾದ, ಹಿಂದುತ್ವ ಮಾತನಾಡಿದರೆ ಕೇಸರೀಕರಣ ಎಂದು ದೂರುವ ಬುದ್ಧಿಜೀವಿಗಳು ಸೇರಿಕೊಂಡು ಇಂದು ಶ್ರೀರಾಮ ನಂಬಿಕೆಯನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿದ್ದಾರೆ. ನಾಳೆ ದೇವತೆಗಳ ಮೇಲಿನ ನಂಬಿಕೆಯನ್ನೇ ದುರ್ಬಲಗೊಳಿಸಲು ಹೇಸುವುದಿಲ್ಲ. ಹಲವು ಮೌಢ್ಯಾಚರಣೆಗಳು ಇರುವ ಇನ್ನೊಂದು ಸಮುದಾಯದ ಬಗ್ಗೆ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತುವವರಿಲ್ಲ. ಅದೇ ಸಮುದಾಯದ ಹೆಣ್ಮಕ್ಕಳಿಗೆ ಹಲವು ಕಟ್ಟುಪಾಡುಗಳಿದ್ದರೂ, ಹಿಂದೂಗಳ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಹೋಗಲು ಬಿಡುವಂತೆ ಒತ್ತಾಯಿಸಿ ಕೇರಳದಲ್ಲಿ ನಡೆದ ಮಹಿಳಾಗೋಡೆಯಲ್ಲಿ ವರು ಭಾಗವಹಿಸಿರುವುದು ದುರದೃಷ್ಟಕರ’ ಎಂದು ಟೀಕಿಸಿದರು.‌

 ಆರ್‍ಎಸ್‍ಎಸ್‍ ಜಿಲ್ಲಾ ಸಹ ಕಾರ್ಯವಾಹ ನಾಗೇಶ್ ಕುಂಪಲ, ಜಿಲ್ಲಾ ಕಾರ್ಯವಾಹ ಪ್ರವೀಣ್ ತಲಪಾಡಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಉಳ್ಳಾಲ ತಾಲ್ಲೂಕು ವ್ಯವಸ್ಥಾ ಪ್ರಮುಖ್ ಅರ್ಜುನ್ ಮಾಡೂರು, ಬೌದ್ಧಿಕ್ ಪ್ರಮುಖ್ ಸಾಗರ್ ಮಾಡೂರು, ತಾಲ್ಲೂಕು ಪ್ರಚಾರ ಪ್ರಮುಖ್ ಆಶೀಕ್ ಮಾಡೂರು, ತಾಲ್ಲೂಕು ಸಂಪರ್ಕ ಪ್ರಮುಖ್ ವಿಶ್ವನಾಥ್ ಕೊಲ್ಯ, ಮಂಡಲ ಕಾರ್ಯವಾಹ ಗಣೇಶ್ ನಡಾರು, ಸಹ ಕಾರ್ಯವಾಹ ರಾಜೇಶ್ ಪಾನೀರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !