ಸೋಮವಾರ, ಜೂನ್ 14, 2021
24 °C
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಖಂಡನೆ

ಜಿಲ್ಲೆಯ ವಿವಿಧೆಡೆ ಬಿಜೆಪಿಯಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಬಿಜೆಪಿ ಮಂಗಳೂರು ಕ್ಷೇತ್ರ ವತಿಯಿಂದ ತೊಕ್ಕೊಟ್ಟು ಕಾಪಿಕಾಡಿನ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ದಿ.ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ಪ್ರೈವೆಟ್ ಲಿಮಿಟೆಡ್ ಇದರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕಾರ್ಯದರ್ಶಿಗಳಾದ ಆನಂದ ಶೆಟ್ಟಿ, ನವೀನ್ ಶೆಟ್ಟಿ ಕುರ್ನಾಡು, ಕೋಟೆಕಾರು ಶಕ್ತಿಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಕಾರ್ಯದರ್ಶಿ ಪುರುಷೋತ್ತಮ ಗಟ್ಟಿ ಪರಿಯತ್ತೂರು, ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಯಶವಂತ ಅಮೀನ್, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಮೋರೆ, ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಹಿಂದುಳಿದ ವರ್ಗಗಳ ಅಧ್ಯಕ್ಷ ರವಿ ಸೋವೂರು, ಕಾರ್ಯದರ್ಶಿ ಭರತ್ ಗಟ್ಟಿ ಕಟ್ಟಪುಣಿ, ರೈತ ಮೋರ್ಚಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಂಜನಾಡಿ, ಕೌನ್ಸಿಲರ್‌ಗಳಾದ ರಾಜೇಶ್ ಯು. ಬಿ. ಗೀತಾಬಾಯಿ, ಜಿಲ್ಲಾ ಸಮಿತಿ ಸದಸ್ಯರಾದ ಸುಜಿತ್ ಕಂಬ್ಲಪದವು, ಜೀವನ್ ತೊಕ್ಕೊಟ್ಟು, ರಾಜೇಶ್ ಮಡಿವಾಳ, ಅವಿನಾಶ್ ಶೆಟ್ಟಿ ತೊಕ್ಕೊಟ್ಟು, ಮಾಧ್ಯಮ ಪ್ರಮುಖ್ ಪುರುಷೋತ್ತಮ ಕಲ್ಲಾಪು ಇದ್ದರು.

ಸುಳ್ಯದಲ್ಲಿ ಪ್ರತಿಭಟನೆ: ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.

ಸುಳ್ಯದ ಬಿಜೆಪಿ ಕಚೇರಿ ಕಟ್ಟಡದ ಮೆಟ್ಟಿಲಲ್ಲಿ ಅರ್ಧ ಗಂಟೆ ಕುಳಿತ ಕಾರ್ಯಕರ್ತರು, ಕೈಗೆ ಕಪ್ಪು ಪಟ್ಟಿ ಧರಿಸಿ ಕೋವಿಡ್ ನಿಯಮಾವಳಿಯಂತೆ ಮೌನ ಪ್ರತಿಭಟನೆ ನಡೆಸಿದರು.

ಬಂಟ್ವಾಳದಲ್ಲಿ ಪ್ರತಿಭಟನೆ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬಳಿ ಬಿಜೆಪಿ ವತಿಯಿಂದ ಬುಧವಾರ  ಪ್ರತಿಭಟನೆ ನಡೆಯಿತು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯ ದರ್ಶಿ ರಾಮದಾಸ್ ಬಂಟ್ವಾಳ್, ಕ್ಷೇತ್ರಾ ಧ್ಯಕ್ಷ ದೇವಪ್ಪ ಪೂಜಾರಿ, ಡೊಂಬಯ ಬಿ.ಅರಳ, ಸುದರ್ಶನ ಬಜ ಇದ್ದರು.

ಪುತ್ತೂರಿನಲ್ಲಿ ಪ್ರತಿಭಟನೆ: ನಗರದಲ್ಲಿ ಬಿಜೆಪಿಯ ವತಿಯಿಂದ ಪ್ರತಿಭಟನೆ ನಡೆಯಿತು.

ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಪಿ. ಜಿ. ಜಗನ್ನಿವಾಸರಾವ್, ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯರಾದ  ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾದ ಕಿರಣ್ ಶಂಕರ ಮಲ್ಯ, ನಗರ ಮಂಡಲ ಉಪಾಧ್ಯಕ್ಷ ಶಿವಕುಮಾರ್ ಪಿ.ಬಿ, ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಡಾ.ಪ್ರಸನ್ನ, ರಫೀಕ್ ದರ್ಬೆ, ರಾಘವೇಂದ್ರ ಪ್ರಭು, ಶಾಸಕರ ಆಪ್ತ ಸಹಾಯಕ ವಸಂತ ವೀರಮಂಗಲ, ಪ್ರಮುಖರಾದ ವಿಶ್ವನಾಥ ಕುಲಾಲ್, ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ರುಕ್ಮಯ್ಯ ಇದ್ಪಾಡಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು