8ರಂದು ಗಡಿನಾಡ ಜಾನಪದ ಉತ್ಸವ

7

8ರಂದು ಗಡಿನಾಡ ಜಾನಪದ ಉತ್ಸವ

Published:
Updated:

ಬದಿಯಡ್ಕ:  ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ  ಇದೇ 8ರಂದು ಬೆಳಗ್ಗೆ 9ರಿಂದ ಬದಿಯಡ್ಕ ಗುರುಸದನದಲ್ಲಿ ಗಡಿನಾಡ ಜಾನಪದ ಉತ್ಸವ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು.

ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಲಿದೆ. ಅರಣ್ಯ ಖಾತೆ ಸಚಿವ ಆರ್ ಶಂಕರ್, ಕಾಸರಗೋಡು ಸಂಸದ ಪಿ ಕರುಣಾಕರನ್, ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಕೆ ಹರೀಶ್ ಕುಮಾರ್ ಭಾಗವಹಿಸುವರು. ಹಿರಿಯ ಜಾನಪದ ಲೇಖಕ ಹಾಗೂ ಸಂಶೋಧಕ ಕೇಳು ಮಾಸ್ತರ್ ಅಗಲ್ಪಾಡಿ ಅವರನ್ನು ಗೌರವಿಸಲಾಗುವುದು.

ಜಾನಪದ ಸಂಸ್ಕೃತಿ ಮೆರವಣಿಗೆಯ ಉದ್ಘಾಟನೆಯನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ನಿರ್ವಹಿಸುವರು. ಕೇರಳ ಕರ್ನಾಟಕ ಪ್ರಸಿದ್ಧ ಜಾನಪದ ತಂಡಗಳಿಂದ ನೃತ್ಯ ವೈಭವ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !