ಶನಿವಾರ, ಏಪ್ರಿಲ್ 1, 2023
32 °C

ಮಂಗಳೂರು | ಮೊಬೈಲ್‌ ಬಳಕೆ: ತಾಯಿ ಗದರಿದ್ದಕ್ಕೆ ಬಾಲಕ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮೊಬೈಲ್‌ ಬಳಸಿದ್ದಕ್ಕೆ ತಾಯಿಯು ಗದರಿಸಿದ್ದರಿಂದ  ಮುನಿಸಿಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಂಕನಾಡಿಯ ನಗರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ನಗರದ ಪದವು ಬಿ.ಗ್ರಾಮದ ಕೋಟಿಮುರದ ರೆಡ್‌ ಬ್ರಿಕ್ಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ಜಗದೀಶ್‌– ವಿನಯಾ ದಂಪತಿಯ ಮಗ ಜ್ಞಾನೇಶ್‌ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.  

ಜ್ಞಾನೇಶ್‌ ಕುಲಶೇಖರದ ಸೇಕ್ರೆಡ್‌ ಹಾರ್ಡ್‌ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ.

‘ಮೊಬೈಲ್‌ ಬಳಸಿದ್ದಕ್ಕೆ ತಾಯಿ ಸೋಮವಾರ ರಾತ್ರಿ ಗದರಿದ್ದರು. ಈ ಕಾರಣಕ್ಕೆ ಜ್ಞಾನೇಶ್‌ ಬೇಸರದಲ್ಲಿದ್ದ. ಸ್ನಾನ ಮಾಡಿ ಬರುವುದಾಗಿ ಹೇಳಿ ಕೋಣೆಯೊಳಗೆ ಹೋದವನು ಹೊರಗೆ ಬಂದಿರಲಿಲ್ಲ. ತಂದೆ ಜಗದೀಶ್ ಅವರು ಸ್ನಾನದ ಕೋಣೆಯ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕ ಸೀಲಿಂಗ್ ಫ್ಯಾನ್‌ಗೆ ಶಾಲಿನಿಂದ ನೇಣು ಬಿಗಿದುಕೊಂಡಿದ್ದ. ಕೂಡಲೇ ನೇಣು ಬಿಗಿದ ಶಾಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಆತ ಮೃತಪಟ್ಟಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು