ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಪೆ: ಏ.28 ರವರೆಗೆ ಬಾರ್ದಿಲ ಕ್ಷೇತ್ರದಲ್ಲಿ ಬ್ರಹ್ಮಕಲಶ

Published 26 ಏಪ್ರಿಲ್ 2024, 4:04 IST
Last Updated 26 ಏಪ್ರಿಲ್ 2024, 4:04 IST
ಅಕ್ಷರ ಗಾತ್ರ

ಬಜಪೆ: ಮಂಗಳೂರು ತಾಲ್ಲೂಕಿನ ಕಿಲೆಂಜಾರು ಕುಪ್ಪೆಪದವು ಬಾರ್ದಿಲ ದೇವರಗುಡ್ಡೆಯಲ್ಲಿ ಜೀರ್ಣೋದ್ಧಾರಗೊಂಡಿರುವ ಸಾಂಬಸದಾಶಿವ ದೇವಸ್ಥಾನದಲ್ಲಿ ಸಾಂಬಸದಾಶಿವ ದೇವರ ಹಾಗೂ ಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಾಜನ್ ದೈವ ಕೊಡಮಣಿತ್ತಾಯ ದೈವ ಪ್ರತಿಷ್ಠೆಯು ದೇರೆಬೈಲು ಶಿವಪ್ರಸಾದ್ ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಕಾರಂತ ಅವರ ಸಹಯೋಗದಲ್ಲಿ ಏ.28ರವರೆಗೆ ನಡೆಯಲಿದೆ.

ಏ.26ರಂದು ಬೆಳಿಗ್ಗೆ 10.40ಕ್ಕೆ ಸಾಂಬಸದಾಶಿವ ದೇವರ ಲಿಂಗ ಪ್ರತಿಷ್ಠೆ, ಗಣಪತಿ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಬೆಳಿಗ್ಗೆ 11ರಿಂದ ಭಜನಾ ಸಂಕೀರ್ತನೆ, 12ರಿಂದ ರಸ ಮಂಜರಿ, ರಾಗ ನಿನಾದ, ಸಂಜೆ 5.30ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

27ರಂದು ಬೆಳಿಗ್ಗೆ ನಾಗದೇವರ ಸನ್ನಿಧಿಯಲ್ಲಿ ಕಲಶಾಭಿಷೇಕ, ರಕ್ತೇಶ್ವರಿ ಸನ್ನಿಧಿಯಲ್ಲಿ ನವಕಲಶಾಭಿಷೇಕ, ಬೆಳಿಗ್ಗೆ 11ರಿಂದ ಭಜನೆ,
12ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5ರಿಂದ ಮೂಡುಬಿದಿರೆಯ ಚೌಟರ ಅರಮನೆಯ ಕುಲದೀಪ್ ಚೌಟ ಅವರ ಅಧ್ಯಕ್ಷತೆಯಲ್ಲಿ, ಸೋಲೂರು ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ಕಲಶಾಧಿವಾಸ, ಹೋಮ ನಡೆಯಲಿದೆ.

ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 28ರಂದು ಬೆಳಿಗ್ಗೆ 7.30ರಿಂದ ಬ್ರಹ್ಮ ಕಲಶಾಭಿಷೇಕ, 10.20ಕ್ಕೆ ಸಾಂಬಸದಾಶಿವ ದೇವರಿಗೆ, ಮಹಾಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ 12ರಿಂದ ಸಾಮಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ರಾತ್ರಿ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ, ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಬಾರ್ದಿಲ
ಬಾರ್ದಿಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT