ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರು ಡಿಕ್ಕಿ: ಮೇಳದ ಸಿಬ್ಬಂದಿ ಸಾವು

Last Updated 16 ಏಪ್ರಿಲ್ 2023, 5:09 IST
ಅಕ್ಷರ ಗಾತ್ರ

ಮಂಗಳೂರು: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿಯೊಬ್ಬರು ಮುಕ್ಕ ಬಳಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಶುಕ್ರವಾರ ಮೃತಪಟ್ಟಿದ್ದಾರೆ.

ಮೇಳದ ಸಿಬ್ಬಂದಿ ಜೀವನ್ ಕುಮಾರ್ (36) ಮೃತರು. ಮುಕ್ಕಾದ ಸತ್ಯ ಧರ್ಮ ದೇವಸ್ಥಾನದಲ್ಲಿ ಧರ್ಮಸ್ಥಳದ ಮೇಳದವರು ಉಳಿದುಕೊಂಡಿದ್ದರು. ಮೇಳದ ಪೂಜಾ ಸಾಮಾಗ್ರಿಗಳನ್ನು ತರಲು ಜೀವನ್‌ ಕುಮಾರ್‌ ರಸ್ತೆ ಆಚೆಯ ಅಂಗಡಿಗೆ ಭೇಟಿ ನೀಡಿದ್ದರು. ರಸ್ತೆ ದಾಟುವಾಗ ಸುರತ್ಕಲ್‌ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅವರು ಸ್ಥಳದಲ್ಲೇ ಅಸುನೀಗಿದ್ದರು.

ಧರ್ಮಸ್ಥಳ ಮೇಳದ ಗಿರೀಶ್‌ ಹೆಗ್ಡೆ ಬಿ.ಎನ್‌. ದೂರು ನೀಡಿದ್ದು, ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT