ಶನಿವಾರ, ಮೇ 28, 2022
31 °C

ರಾವತ್‌ ಸಾವಿಗೆ ಸಂಭ್ರಮ: ಮಂಗಳೂರಿನಲ್ಲಿ 3 ಫೇಸ್‌ಬುಕ್‌ ಖಾತೆಗಳ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಕ್ಷಣಾ ಪಡೆಗಳ ಮುಖ್ಯಸ್ಥ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಸಾವಿನ ಸಂಭ್ರಮಾಚರಣೆ ಮಾಡಿರುವ ಆರೋಪದಲ್ಲಿ ಮೂರು ಫೇಸ್‌ಬುಕ್‌ ಖಾತೆಗಳ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವಸಂತಕುಮಾರ್‌ ಟಿ.ಕೆ, ಶ್ರೀನಿವಾಸ ಕಾರ್ಕಳ ಎನ್ನುವ ಫೇಸ್‌ಬುಕ್‌ ಖಾತೆ ಹಾಗೂ ಇನ್ನೊಂದು ಅಪರಿಚಿತ ಖಾತೆಯಲ್ಲಿ ಬಿಪಿನ್‌ ರಾವತ್‌ ಸಾವಿನ ಬಗ್ಗೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಆ ಖಾತೆಗಳು ಯಾರದ್ದು, ಅವುಗಳ ಮೂಲ, ಅವು ಅಸಲಿ ಖಾತೆಗಳೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ:

‘ಈ ಬಗ್ಗೆ ಸುಶಾಂತ್ ಪೂಜಾರಿ ದೂರು ನೀಡಿದ್ದು, ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ. ದೂರಿನಲ್ಲಿ ಆರೋಪಿಸಿರುವ ಫೇಸ್‌ಬುಕ್ ಖಾತೆದಾರರಲ್ಲಿ ಒಬ್ಬರು ಬೆಂಗಳೂರಿನವರು, ಮತ್ತೊಬ್ಬರು ಕಾರ್ಕಳದವರಾಗಿದ್ದು, ಇನ್ನೊಂದು ಖಾತೆ ಅಪರಿಚಿತವಾಗಿದೆ. ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು