ಮಂಗಳೂರು: ನಗರದ ಚಿನ್ಮಯ ವಿದ್ಯಾಸಂಸ್ಥೆಯು 2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ.
ಪೃಥ್ವಿ ಎಸ್ 625ಕ್ಕೆ 615 ಅಂಕ (ಶೇ 98.4), ವರ್ಷಿಣಿ ಡಿ.ಎಸ್ 612 ಅಂಕ (ಶೇ 97.92), ಆಶಿಕಾ 611 ಅಂಕ (ಶೇ 97.76) ಪಡೆದಿದ್ದು, 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.