ಮಂಗಳೂರು: ಬಡ ಮುಸ್ಲಿಮರ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವ ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ನ ದಶಮಾನೋತ್ಸವ ಹಾಗೂ ಸನದುದಾನ ಸಮಾರಂಭವು ನ.1ರಿಂದ ನ.3ರವರೆಗೆ ಏರ್ಪಡಿಸಲಾಗಿದೆ. ನ.3ರಂದು ನಡೆಯುವ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈ ಹಿಂದೆ ಖಾಜಿಯಾಗಿದ್ದ ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕ್ಕ ಸ್ಮರಣಾರ್ಥ ‘ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ ವತಿಯಿಂದ ಕಾಶಿಪಟ್ಣದ 12.5 ಎಕ್ರೆ ಜಾಗದಲ್ಲಿ ದಾರುನ್ನೂರ್ ಎಜುಕೇಶನ್ ಸೆಂಟರ್ ಸ್ಥಾಪಿಸಲಾಗಿದೆ. ಜಿಲ್ಲೆಯ ಸಂಯುಕ್ತ ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ 330 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಮಹಿಳಾ ಕಾಲೇಜನ್ನು ಸ್ಥಾಪಿಸುವ ಚಿಂತನೆ ಇದೆ’ ಎಂದರು.

‘ದಶಮಾನೋತ್ಸವ ಅಂಗವಾಗಿ ನ.1 ರಂದು ವಾಹನ ಜಾಥ ನಡೆಯಲಿದೆ. ಕೊಯಿಕ್ಕೋಡ್ನ ಖಾಜಿ ಅಸೈಯ್ಯದ್ ಮುಹಮ್ಮದ್ ಕೋಯ ಜಮಲುಲ್ಲೆಲಿ ತಂಙಳ್ ಅವರಿಂದ ಧ್ವಜಾರೋಹಣ ನೆರವೇರಿಸುವರು. ವಿಜ್ಞಾನ, ತಂತ್ರಜ್ಞಾನ, ಪಾರಂಪರಿಕ ವಸ್ತುಗಳು, ವಿಸ್ಮಯ ಲೋಕ, ಮನೋಶಾಸ್ತ್ರ, ಗಣಿತ, ಕೃತಕ ಬುದ್ಧಿಮತ್ತೆ ಕುರಿತ ಪ್ರದರ್ಶನವನ್ನು ಮೂಡುಬಿದಿರೆಯ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಉದ್ಘಾಟಿಸುವರು.’

‘ನ.1ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಮಸ್ತ ಕೇಂದ್ರ ಮುಶಾವರ ಖಜಾಂಚಿ ಶೈಖುನಾ ಉಮರ್ ಮುಸ್ಲಿಯಾರ್ ಕೊಯ್ಯೋಡ್, ಸೈಯ್ಯದ್ ಅಲಿ ತಂಙಳ್ ಕುಂಬೋಳ್, ತ್ವಾಖಾ ಉಸ್ತಾದ್, ಕೇರಳದ ಅಹ್ಮದ್ ಕಬೀರ್ ಬಾಖವಿ ಭಾಗವಹಿಸಲಿದ್ದಾರೆ. ನ. 2 ರಂದು ಬೆಳಿಗ್ಗೆ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನ ಹಾಗೂ ಬ್ಯಾರಿ ಸಾಧಕರಿಗೆ ಸನ್ಮಾನ ಹಾಗೂ ‘ಗಲ್ಫ್ ಮೀಟ್’ ನಡೆಯಲಿದೆ. ಮಧ್ಯಾಹ್ನ ನೂತನ ಗ್ರಂಥಾಲಯವನ್ನು ಅಸೈಯ್ಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದಾರೆ. ಶಹೀದ್ ಸಿ.ಎಂ ಉಸ್ತಾದ್ ಕುರಿತ ವಿಚಾರಸಂಕಿರಣವು ಕೆ.ಎಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ದಾರುಲ್ ಹುದಾ ವಿಶ್ವವಿದ್ಯಾನಿಲಯದ ಕುಲಪತಿ ಬಹಾವುದ್ದೀನ್ ಮುಹಮ್ಮದ್ ನದ್ವಿ ಕೂರಿಯಾಡ್. ಕೊಡಗಿನ ಖಾಝಿ ಅಬ್ದುಲ್ಲಾ ಮುಸ್ಲಿಯಾರ್, ಕೇರಳದ ಸಿಂಸಾರುಲ್ ಹಕ್ ಹುದವಿ ಭಾಗವಹಿಸಲಿದ್ದಾರೆ. ವಲಿಯುದ್ದೀನ್ ಫೈಝಿ ವಾಯಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ’ ಎಂದರು.

‘ನ.3 ರಂದು ಬೆಳಿಗ್ಗೆ ವಿವಿಧ ವಿಚಾರ ಸಂಕಿರಣಗಳು ಹಾಗೂ ಮರ್ಹೂಂ ನೌಶಾದ್ ಸ್ಮಾರಕ ಕಟ್ಟಡದ ಉದ್ಘಾಟನೆಯು ನಡೆಯಲಿದೆ. ಅಂದು ಮಧ್ಯಾಹ್ನ ನಡೆಯುವ ಸೌಹಾರ್ದ ಸ್ನೇಹ ಸಂಗಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಸಚಿವರಾದ ದಿನೇಶ್ ಗುಂಡುರಾವ್. ಜಮೀರ್ ಅಹಮದ್ ಖಾನ್, ರಹೀಂ ಖಾನ್ ಹಾಘೂ ಜಿಲ್ಲೆಯ ಶಾಸಕರು, ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಬಳಿಕ ಶೈಖುನಾ ತ್ವಾಖಾ ಉಸ್ತಾದ್ ಅಧ್ಯಕ್ಷತೆಯಲ್ಲಿ ಸನದು ಪ್ರದಾನ ಸಮ್ಮೇಳನ ನಡೆಯಲಿದೆ. ಸಮಸ್ತ ಕೇರಳ ಜಮಿಯತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷ ಸೈಯ್ಯದುಲ್ ಉಲಮಾ ಜಿಫ್ರೀ ಮುತ್ತುಕೋಯ ತಂಞಳ್, ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಪ್ರೊ. ಶೈಖುನಾ ಆಲಿಹುಟ್ಟಿ ಉಸ್ತಾದ್, ಕಾರ್ಯದರ್ಶಿ ಶೈಖುನಾ ಎಂ.ಟಿ ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖಂಡರಾದ ಅಬೂ ಶಾಲಿ ಹಸ್ಕೊ, ಅದ್ದು, ಫಕೀರಬ್ಬ ಮಾಸ್ಟರ್, ಅಬ್ದುಲ್ ಸಮದ್, ಮಂಗಳೂರಿನ ಸಂಯುಕ್ತ ಖಾಜಿ ತ್ವಾಖಾ ಅಹಮದ್ ಮುಸ್ಲಿಯಾರ್, ಅಬ್ದುಲ್ ಅಕ್ವಂ ಮುಹಮ್ಮದ್ ಭಾಖವಿ, ಶಾಹುಲ್ ಹಮೀದ್ ತಂಙಳ್, ಹಸ್ಕೊ ಅಬ್ದುಲ್ ರಹಿಮಾನ್, ಎಫ್.ಅಬ್ದುಲ್ ಜಲೀಲ್, ಅಬ್ದುಲ್ ಹಕೀಂ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.