ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ | ತೆಂಗಿಗೆ ಬಿಳಿ ನೊಣ ಹಾವಳಿ: ಡ್ರೋನ್‌ ಮೂಲಕ ಕೀಟನಾಶಕ ಸಿಂಪಡಣೆ

Published 7 ಮಾರ್ಚ್ 2024, 15:04 IST
Last Updated 7 ಮಾರ್ಚ್ 2024, 15:04 IST
ಅಕ್ಷರ ಗಾತ್ರ

ತರೀಕೆರೆ: ಸಮೀಪದ ಬಾವಿಕೆರೆ ಗ್ರಾಮದ ರೋಹಿತ್ ಎಂಬವರ ತೆಂಗಿನ ತೋಟದಲ್ಲಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಬಿಳಿ ನೊಣ ಹತೋಟಿಗೆ ಡ್ರೋನ್‌ ಸಹಾಯದಿಂದ ಜೈವಿಕ ಕೀಟನಾಶಕದ ಸಿಂಪಡಣೆಯ ಪ್ರಾತಿಕ್ಷಿಕೆಯನ್ನು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಕೆ. ಸೆಲ್ವರಾಜ್  ಡ್ರೋನ್ ಬಳಸಿ ಕೀಟನಾಶಕ ಸಿಂಪಡಣೆ ಮಾಡುವುದರಿಂದ ಆಗುವ  ಉಪಯೋಗಗಳು ಹಾಗೂ ಡ್ರೋನ್ ಯಂತ್ರ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಗ್ರಾಮಸ್ಥರಿಗೆ ವಿವರಿಸಿದರು.

 ಜಯಲಕ್ಷ್ಮಿ ಹೆಗ್ಡೆ ಮಾತನಾಡಿ, ‘ಡ್ರೋನ್ ಖರೀದಿಗೆ ರೈತರಿಗಾಗಿ ಲಭ್ಯವಿರುವ ವಿವಿಧ ಯೋಜನೆ ಹಾಗೂ ಸಬ್ಸಿಡಿ ಬಗ್ಗೆ ಮಾಹಿತಿ ನೀಡಿದರು.

 ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಜೇಂದ್ರ ಟಿ.ಎಚ್, ಬಸವರಾಜ್, ಕೃಷ್ಣಾ ರೆಡ್ಡಿ , ಮಂಜುನಾಥ್ ಕುದರಿ ಮತ್ತು  ಪವಿತ್ರಾ, ಗ್ರಾಮೀಣ ಕೃಷಿ ಕಾರ್ಯನುಭವ ವಿದ್ಯಾರ್ಥಿಗಳಾದ ಆದಿತ್ಯ, ಭರತ್, ಪಾಲ್, ದೀಕ್ಷಿತ್, ಗಗನ್, ರಾಜೇಂದರ್, ಮನೋಜಿ, ನಿತೀಶ್, ಶರತ್ ಕುಮಾರ್, ಶರತ್ ಮಾಳಗಿ, ಸುಷನ್, ಶ್ರೇಯಸ್, ವಿಶ್ವನಾಥ್ ಗೌಡ ಹಾಗೂ ಬಾವಿಕೆರೆ ಗ್ರಾಮದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT