ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ಶಂಕೆ; ಕೂಂಬಿಂಗ್ ಆರಂಭ

ರೈಲ್ವೆ ಸಿಬ್ಬಂದಿಗೆ ಬೆದರಿಕೆ; ಸುಬ್ರಹ್ಮಣ್ಯ, ಸಂಪಾಜೆ, ಬಿಸಿಲೆ ಭಾಗಗಳಲ್ಲಿ ಕಾರ್ಯಾಚರಣೆ
Last Updated 26 ಜುಲೈ 2019, 19:50 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಬೆಂಗಳೂರು-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್‌ ಎಡಕುಮೇರಿ ಭಾಗದಲ್ಲಿ ಇದೇ 22ರಂದು ರೈಲು ಹಳಿ ಗಸ್ತು ನಿರತ ಸಿಬ್ಬಂದಿಗೆಇಬ್ಬರು ಅಪರಿಚಿತ ವ್ಯಕ್ತಿಗಳು ಬೆದರಿಕೆ ಒಡ್ಡಿದ ಬಳಿಕ ಅವರು ನಕ್ಸಲರು ಎಂಬ ಶಂಕೆ ಮೇರೆಗೆ ಈ ಭಾಗದ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ.

ರೈಲ್ವೆ ಕಾರ್ಮಿಕ ರಾಜು ಅವರಿಗೆ ಶಸ್ತ್ರಧಾರಿ ಅಪರಿಚಿತರಿಬ್ಬರು ಬೆದರಿಕೆ ಒಡ್ಡಿದ್ದರು. ಬಳಿಕ ತಲೆಮರೆಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಬಿಸಿಲೆ ಘಾಟ್, ಸಂಪಾಜೆ, ಸುಬ್ರಹ್ಮಣ್ಯ ಹಾಗೂ ಕೊಡಗು ಅರಣ್ಯ ಭಾಗಗಳಲ್ಲಿ ಕಾರ್ಕಳ ಎಎನ್ಎಫ್ ಪಡೆಯ ಯೋಧರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಡಿಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT