ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 77 ಜನರಲ್ಲಿ ರೋಗ ಲಕ್ಷಣ

ದ.ಕ. ಜಿಲ್ಲೆಯಲ್ಲಿ 209 ಮಂದಿ ಗುಣಮುಖ, 144 ಹೊಸ ಪ್ರಕರಣ
Last Updated 18 ಆಗಸ್ಟ್ 2020, 6:27 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 144 ಜನರಲ್ಲಿ ಕೋವಿಡ್–19 ದೃಢವಾಗಿದೆ. ಜತೆಗೆ 209 ಜನರು ಗುಣಮುಖರಾಗಿದ್ದು, 8 ಜನರು ಮೃತಪಟ್ಟಿದ್ದಾರೆ.

144 ಪ್ರಕರಣಗಳ ಪೈಕಿ 60 ಐಎಲ್‌ಐ ಪ್ರಕರಣ, 16 ಎಸ್‌ಎಆರ್‌ಐ ಪ್ರಕರಣಗಳಿದ್ದು, 21 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢವಾಗಿದೆ. 47 ಜನರ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ. ಮಂಗಳೂರು ತಾಲ್ಲೂಕಿನಲ್ಲಿ 88, ಬಂಟ್ವಾಳ 18, ಪುತ್ತೂರು 8, ಸುಳ್ಯ 1, ಬೆಳ್ತಂಗಡಿ ತಾಲ್ಲೂಕಿನಲ್ಲಿ 10 ಹಾಗೂ ಬೇರೆ ಜಿಲ್ಲೆಗಳ 19 ಜನರಲ್ಲಿ ಕೋವಿಡ್–19 ಖಚಿತವಾಗಿದೆ.

ಸೋಂಕಿತರ ಪೈಕಿ 51 ಪುರುಷರು, 26 ಮಹಿಳೆಯರು ಸೇರಿದಂತೆ 77 ಜನರಲ್ಲಿ ರೋಗಲಕ್ಷಣಗಳು ಕಂಡು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿ
ಸಲಾಗಿದೆ. 39 ಪುರುಷರು ಹಾಗೂ 28 ಮಹಿಳೆಯರು ಸೇರಿದಂತೆ 67 ಜನರಲ್ಲಿ ರೋಗ ಲಕ್ಷಣವಿಲ್ಲ. ಅವರಿಗೆ ಕೋವಿಡ್ ಕೇರ್‌ ಸೆಂಟರ್‌ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

209 ಗುಣಮುಖ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 209 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಕೇರ್ ಸೆಂಟರ್‌ನಲ್ಲಿದ್ದ 13, ಹೋಂ ಐಸೋಲೇಷನ್‌ನಲ್ಲಿದ್ದ 96 ಹಾಗೂ ಚಿಕಿತ್ಸೆ ಪಡೆಯುತ್ತಿದ್ದ 100 ಜನರು ಗುಣಮುಖರಾಗಿದ್ದಾರೆ.

ಎಲ್ಲರ ಗಂಟಲು ದ್ರವದ ಮಾದರಿ ತಪಾಸಣೆ ಮಾಡಲಾಗಿದ್ದು, ವರದಿ ನೆಗೆಟಿವ್‌ ಬಂದಿದೆ. ಇವರನ್ನು ಮನೆಗೆ ಕಳುಹಿಸಲಾಗಿದೆ. 14 ದಿನಗಳ ಕ್ವಾರಂಟೈನ್‌ ವಿಧಿಸಲಾಗಿದೆ.

8 ಮಂದಿ ಸಾವು: ಜಿಲ್ಲೆಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ಸೋಮವಾರ ದೃಢವಾಗಿದೆ.

ಮಂಗಳೂರು ತಾಲ್ಲೂಕಿನ3, ಬಂಟ್ವಾಳ ಹಾಗೂ ಪುತ್ತೂರು ತಾಲ್ಲೂಕಿನ ತಲಾ ಒಬ್ಬರು, ಬೇರೆ ಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ. ಇವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ನಗರದ ಖಾಸಗಿ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಇವರಿಗೆ ಕೋವಿಡ್–19 ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

9 ಸಾವಿರದ ಗಡಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ದಾಟಿದ್ದು, ಒಟ್ಟು 9,022 ಜನರಿಗೆ ಕೋವಿಡ್‌ ದೃಢವಾಗಿದೆ. ಮಾರ್ಚ್‌ 22 ರಂದು ಜಿಲ್ಲೆಯಲ್ಲಿ ಪ್ರಥಮ ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಗಂಟಲು ದ್ರವದ ಮಾದರಿ ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೆ ಒಟ್ಟು 70,657 ಮಂದಿಯ ಮಾದರಿ ಪರೀಕ್ಷಿಸಲಾಗಿದ್ದು, 61,635 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಕಾಸರಗೋಡು: ನಾಲ್ವರ ಸಾವು

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 97 ಜನರಿಗೆ ಕೋವಿಡ್–19 ದೃಢಪಟ್ಟಿದೆ. ಸಂಪರ್ಕದ ಮೂಲಕ 91 ಜನರಿಗೆ ಸೋಂಕು ತಗುಲಿದೆ. ನಾಲ್ವರು ಬೇರೆ ರಾಜ್ಯಗಳಿಂದ ಬಂದಿದ್ದು, ವಿದೇಶದಿಂದ ಬಂದ ಇಬ್ಬರಲ್ಲಿ ಖಚಿತವಾಗಿದೆ.

ಜಿಲ್ಲೆಯಲ್ಲಿ ಸೋಮವಾರ 174 ಜನರ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಕೋವಿಡ್‌ ಕೇರ್‌ ಸೆಂಟರ್, ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದೇ 10 ರಂದು ಮೃತಪಟ್ಟಿದ್ದ 38 ಹಾಗೂ 55 ವರ್ಷದ ಇಬ್ಬರಿಗೆ ಹಾಗೂ ಇದೇ 16 ರಂದು ಮೃತಪಟ್ಟಿದ್ದ ಏಳು ತಿಂಗಳ ಮಗು ಹಾಗೂ 47 ವರ್ಷದ ವ್ಯಕ್ತಿಗೆ ಕೋವಿಡ್‌–19 ಇರುವುದು ಸೋಮವಾರ ದೃಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT