ಮಂಗಳವಾರ, ಅಕ್ಟೋಬರ್ 22, 2019
21 °C

ತಾಯಿ, ಮಕ್ಕಳು ಆತ್ಮಹತ್ಯೆ ಪ್ರಕರಣ: ಬಂಟ್ವಾಳದಲ್ಲಿ ಪುತ್ರನ ಶವ ಪತ್ತೆ

Published:
Updated:
Prajavani

ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ನದಿಗೆ ಸೇತುವೆ ಮೇಲಿನಿಂದ ಸಾಕುನಾಯಿ ಜೊತೆಗೆ ತಾಯಿ ಮತ್ತು ಇಬ್ಬರು ಮಕ್ಕಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪುತ್ರ ಕೌಶಿಕ್ ಮಂದಣ್ಣ (29) ಅವರ ಶವ ಮಂಗಳವಾರ ಸಿಕ್ಕಿದೆ.

ಮೈಸೂರಿನ ಮನೆಯಲ್ಲಿ ಯಜಮಾನನ ಸಾವಿನಿಂದ ಮನ ನೊಂದು ಶನಿವಾರ ತಡ ರಾತ್ರಿ ಕಾರಿನಲ್ಲಿ ಬಂದು ನೇತ್ರಾವತಿ ನದಿಗೆ ಹಾರಿದ್ದರು. ಈ ಪೈಕಿ ತಾಯಿ ಮತ್ತು ಪುತ್ರಿಯ ಶವ ಶನಿವಾರ ಮತ್ತು ಭಾನುವಾರ ಪತ್ತೆಯಾಗಿತ್ತು. ಇದೀಗ ಮೖತರ ಪುತ್ರ ಕೌಶಿಕ್ ಮಂದಣ್ಣ ಇವರ ಮೃತದೇಹ ಬಿ.ಸಿ.ರೋಡು ಸಮೀಪದ ಪರ್ಲಿಯಾ- ತಾಳಿಪಡ್ಪು ಎಂಬಲ್ಲಿ ತೇಲುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕದಳ ತಂಡ, ಎನ್‌ಡಿಆರ್‌ಎಫ್‌ ತಂಡ, ಸ್ಥಳೀಯ ಈಜುಗಾರರ ನೆರವಿನೊಂದಿಗೆ ಮೃತದೇಹ ಮೇಲೆತ್ತಿ ಮಂಗಳೂರು ವೆನ್ಲಾಕ್‌ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)