ಬಂಧಿತರನ್ನು ನೆಲ್ಲಿಗುಡ್ಡೆಯ ರಹಿಮಾನ್, ಸಾಲೆತ್ತೂರು ಸಮೀಪದ ಕಟ್ಟೆತ್ತಿಲ್ಲ ಜಲಾಲುದ್ದೀನ್, ಒಕ್ಕೆತ್ತೂರು ಫೈಜಲ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿರುದ್ಧ ಈಗಾಗಲೇ ಕಳವು, ದರೋಡೆ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಕೇರಳದಿಂದ ಕರ್ನಾಟಕದ ಭಾಗಗಳಿಗೆ ಮಾದಕ ದ್ರವ್ಯಗಳನ್ನು ಸಾಗಾಟ ಮಾಡುವ ಅಂತರರಾಜ್ಯ ಜಾಲದಲ್ಲಿ ಸಕ್ರಿಯರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.