ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ನಗರ ಪಂಚಾಯಿತಿ ಸಾಮಾನ್ಯ ಸಭೆ: ಅಂಗವಿಕಲನ ಸಹಾಯಧನ ಕಡಿತ; ಆಕ್ಷೇಪ

Last Updated 31 ಜನವರಿ 2023, 5:44 IST
ಅಕ್ಷರ ಗಾತ್ರ

ಬೆಳ್ತಂಗಡಿ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷೆ ರಜನಿ ಕುಡ್ವ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ನಗರ ವ್ಯಾಪ್ತಿಯಲ್ಲಿದ್ದ ಅಂಗವಿಕಲರಿಗೆ ಈ ಹಿಂದೆ ₹5,000ವರೆಗೆ ಸಹಾಯಧನ ನೀಡಲಾಗುತ್ತಿತ್ತು. ಈಗ ಅದನ್ನು ಕಡಿತಗೊಳಿಸಿ ₹1,600 ನೀಡಲಾಗುತ್ತಿದೆ. ಪತಿಯ ತೆರಿಗೆ ಬಾಕಿ ಇದ್ದರೆ, ಅಂಗವಿಕಲ ಪತ್ನಿ, ಆ ತೆರಿಗೆ ಪಾವತಿಸಿ ಸಹಾಯಧನ ಪಡೆದುಕೊಳ್ಳಲು ಬರಬೇಕು ಎಂದು ಒತ್ತಾಯ ಮಾಡಲಾಗುತ್ತಿದ್ದು, ಇದು ಸರಿಯಲ್ಲ. ಅಂಗವಿಕಲ ವ್ಯಕ್ತಿಗೆ ಯಾವುದೇ ವೆಚ್ಚಬಾರದಂತೆ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜಗದೀಶ್ ಒತ್ತಾಯಿಸಿದರು.

ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಗದೀಶ್, ‘ಶ್ರೀಮಂತರ ತೆರಿಗೆ ಪಾವತಿ ಬಾಕಿ ಇದ್ದರೆ ಮೌನವಾಗಿರುತ್ತೀರಿ. ಅಂಗವಿಕಲರ ಬಗ್ಗೆ ಯಾಕೆ ಕಾಳಜಿ ಇಲ್ಲ’ ಎಂದರು.

ಸಾರ್ವಜನಿಕ ಕುಡಿಯುವ ನೀರನ್ನು ಮನೆ ನಿರ್ಮಾಣಕ್ಕೆ ಬಳಕೆ ಮಾಡಿ ಸ್ಥಾಯಿ ಸಮಿತಿ ಅಧ್ಯಕ್ಷರು ನಿಯಮ ಉಲ್ಲಂಘಿಸಿದ್ದಾರೆ ಎಂದು ಸದಸ್ಯೆ ರಾಜಶ್ರೀ ರಮಣ್ ಆರೋಪಿಸಿದರು. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಉತ್ತರಿಸಿ, ಯಾವುದೇ ಸ್ವಾರ್ಥ ಉದ್ದೇಶಕ್ಕಾಗಿ ತಡೆಗೋಡೆಯಂತಹ ಕಾಮಗಾರಿಗಳನ್ನು ನಾನು ಮಂಜೂರುಗೊಳಿಸಿಕೊಂಡಿಲ್ಲ. ಇಲ್ಲಿನ ಹಲವಾರು ಮನೆಗಳಿಗೆ ಅಪಾಯವಾಗದಂತೆ, ಅವರ ಬೇಡಿಕೆಯಂತೆ ತಡೆಗೋಡೆ ನಿರ್ಮಿಸಲಾಗಿದೆ ಎಂದರು.

ಚರ್ಚ್ ಶಾಲಾ ಆವರಣದಲ್ಲಿ ಅಪಾಯಕಾರಿ ವಿದ್ಯುತ್ ವಿತರಕ ಇದ್ದು, ಇದನ್ನು ಸ್ಥಳಾಂತರಿಸಲು ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ರಾಜಶ್ರೀ ರಮಣ್ ತಿಳಿಸಿದಾಗ ಸಹಾಯಕ ಎಂಜಿನಿಯರ್ ಮಧುಬಾಬು ಉತ್ತರಿಸಿ, ಈ ಬಗ್ಗೆ ಪರಿಶೀಲಿಸಿ ಎರಡು ವಾರಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ ಬ್ಯಾನರ್ ಅಳವಡಿಕೆ ಬಗ್ಗೆ ಮಾಹಿತಿ ನೀಡಬೇಕು. ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು, ಚರ್ಚ್ ಬಳಿ ಇರುವ ಅಪಾಯಕಾರಿ ನೀರಿನ ಟ್ಯಾಂಕ್ ಅನ್ನು ತಕ್ಷಣ ದುರಸ್ತಿಗೊಳಿಸಬೇಕು., ಮೆಲಂತಬೆಟ್ಟು ಬಳಿ ಹೊಸದಾದ ನೀರಿನ ಟ್ಯಾಂಕ್ ಅನ್ನು ನಿರ್ಮಾಣ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT