ಭಾನುವಾರ, ಮೇ 22, 2022
24 °C

ಪ್ರಿಯತಮೆ‌ ಜೊತೆ ಮನಸ್ತಾಪ: ಮೊಬೈಲ್ ಟವರ್ ಏರಿದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪ್ರೀತಿಸಿದ ಹುಡುಗಿಯೊಂದಿ ಮನಸ್ತಾಪ ಮಾಡಿಕೊಂಡಿದ್ದ ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದು, ಮನವೊಲಿಕೆಯ ನಂತರ ಕೆಳಗೆ ಇಳಿದು ಬಂದಿದ್ದಾನೆ.

ಕೆಂಜಾರಿನ ಸುಧೀರ್, ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಮನಸ್ತಾಪ ಆಗಿದ್ದು, ಸೋಮವಾರ ಬೆಳಿಗ್ಗೆ ಅಡ್ಯಾರ್ ಬಳಿ ಇರುವ ಮೊಬೈಲ್‌ ಟವರ್ ಏರಿ ಕುಳಿತಿದ್ದ. ಪ್ರೀತಿಸಿದ ಯುವತಿ ಸ್ಥಳಕ್ಕೆ ಬಂದ ನಂತರ ಆತನು ಟವರ್‌ನಿಂದ ಕೆಳಗೆ ಇಳಿದಿದ್ದಾನೆ.

ಯುವಕನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಯ್ಸಳ ತಂಡದವರು ಯುವಕನನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು