ಶನಿವಾರ, ಅಕ್ಟೋಬರ್ 1, 2022
20 °C

ಮರೋಡಿ: ಆಟಿಡೊಂಜಿ ಕೆಸರ್ದ ಕೂಟ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಅರುಣೋದಯ ಯುವಕ ಮಂಡಲದ ವತಿಯಿಂದ ಆಟಿಡೊಂಜಿ ಕೆಸರ್ದ ಕೂಟ ಆ.14ರಂದು ಮರೋಡಿ ಬೊವೂರಿ ಜಯಪೂಜಾರಿ ಅವರ ಗದ್ದೆಯಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 9ಕ್ಕೆ ಶಾಸಕ ಹರೀಶ್‌ ಪೂಂಜ ಕೂಟಕ್ಕೆ ಚಾಲನೆ ನೀಡುವರು. ಯುವಕ ಮಂಡಲದ ಗೌರವಾಧ್ಯಕ್ಷ ಜಯಂತ ಕೋಟ್ಯಾನ್‌ ಅಧ್ಯಕ್ಷತೆ ವಹಿಸುವರು. ಸಂಜೆ ಯುವಕ ಮಂಡಲದ ಅಧ್ಯಕ್ಷ ನವೀನ್‌ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಗೋವಿಂದ ಸ್ಪರ್ಧೆ, ಮೂರು ಕಾಲಿನ ಓಟ, ಉಪ್ಪಿನ ಮೂಟೆ, ಮಹಿಳೆಯರಿಗೆ ಥ್ರೋಬಾಲ್‌, ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಹಾಲೆ ಓಟ, 100 ಮೀಟರ್‌ ಓಟ, ಮಕ್ಕಳಿಗೆ ಮಡಕೆ ಒಡೆಯುವುದು, ಕಬಡ್ಡಿ, ಉಪ್ಪಿನಮೂಟೆ ಓಟ, ಹಾಲೆ ಓಟ, 100 ಮೀಟರ್‌ ಓಟ, ಹಿರಿಯ ನಾಗರಿಕರಿಗೆ ವೇಗದ ನಡಿಗೆ, ಪಾಡ್ದನ, ಇನ್ನಿತರ ಜನಪದ ಕ್ರೀಡೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7338172976, 9008455724 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.