ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ, ರಸಪ್ರಶ್ನೆ ಸ್ಪರ್ಧೆ: ಅನ್ವಿತಾ, ಸಿಂಧೂರ ಪ್ರಥಮ

Last Updated 7 ಅಕ್ಟೋಬರ್ 2022, 15:36 IST
ಅಕ್ಷರ ಗಾತ್ರ

ಕಾಸರಗೋಡು: ಪೆರಡಾಲದ ಅನ್ವಿತಾ ಟಿ ಮತ್ತು ನೀರ್ಚಾಲಿನ ಸಿಂಧೂರ ಕೆ.ಆರ್‌, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕವು ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಕ್ರಮವಾಗಿ ನಾಡಗೀತೆ ಮತ್ತು ರಸಪ್ರಶ್ನೆಯ ಹೈಸ್ಕೂಲ್‌ ವಿಭಾಗದ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.

ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ನಡೆದ ನಾಡಗೀತೆ ಸ್ಪರ್ಧೆಯಲ್ಲಿ ಎಂಎಸ್‌ಸಿಎಚ್‌ಎಸ್‌ನ ಅನ್ವಿತಾ ಪ್ರಥಮ ಬಹುಮಾನ ಗಳಿಸಿದರೆ, ಪೆರಡಾಲ ಎನ್‌ಎಚ್‌ಎಸ್‌ನ ಕೃಪಾ ರೈ ಎಂ ದ್ವಿತೀಯರಾದರು. ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸ್ವರ್ಗದ ಎಸ್‌ವಿಎ ಶಾಲೆ ವಿದ್ಯಾರ್ಥಿನಿ ಧನ್ವಿ ವಿ.ಎಸ್ ಪ್ರಥಮ, ಕುಂಟಾರು ಎಯುಪಿ ಶಾಲೆಯ ಆಶಿಕಾ ರಾವ್ ದ್ವಿತೀಯ ಸ್ಥಾನ ಗಳಿಸಿದರು. ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸ್ವರ್ಗದ ಎಸ್‌ವಿಎ ಶಾಲೆಯ ರೇಷ್ಮಾ ಬಿ ಪ್ರಥಮ, ಕುಂಟಿಕಾನದ ಎಎಸ್‌ಬಿಎಸ್‌ ಶಾಲೆಯ ಭೂಮಿಕಾ ಆರ್.ಕೆ ದ್ವಿತೀಯ ಬಹುಮಾನ ಗಳಿಸಿದರು.

ರಸಪ್ರಶ್ನೆ ಸ್ಪರ್ಧೆಯ ಹೈಸ್ಕೂಲ್ ವಿಭಾಗದಲ್ಲಿ ನೀರ್ಚಾಲು ಎಂಎಸ್‌ಸಿಎಚ್‌ಎಸ್‌ನ ಸಿಂಧೂರ ಕೆ.ಆರ್ ಪ್ರಥಮ, ಪೆರಡಾಲ ಜಿಎಚ್‌ಎಸ್‌ನ ಲಾವಣ್ಯ ಕೆ ದ್ವಿತೀಯ, ಪೆರಡಾಲ ಎನ್‌ಎಚ್‌ಎಸ್‌ನ ಪ್ರೀತಿಶಾ ಕ್ರಾಸ್ತ ತೃತೀಯ ಸ್ಥಾನ ಗಳಿಸಿದರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಬೇಳ ಬಿಎಎಸ್‌ಬಿ ಶಾಲೆಯ ಜೋಯಿಸ್ಟನ್ ಕ್ರಾಸ್ತ ಮೊದಲಿಗರಾದರೆ ಪೆರಡಾಲ ಎನ್‌ಎಚ್‌ಎಸ್‌ನ ಅರ್ಜುನ್ ವಿ. ಭಟ್‌ ದ್ವಿತೀಯರಾದರು. ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ನಲ್ಕ ಶಾಲೆಯ ವಿಎಎಲ್‌ಪಿಯ ಅಮೋಘ ಬಿ ಪ್ರಥಮ, ಬೆದ್ರಂಪಳ್ಳ ಎಎಲ್‌ಪಿ ಶಾಲೆಯ ಭೂಮಿಕಾ ಬಿ ದ್ವಿತೀಯ ಬಹುಮಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT