ಸಿಪಿಎಂ ಮುಖಂಡ ಬಿ. ಮಾಧವ ನಿಧನ

ಭಾನುವಾರ, ಜೂಲೈ 21, 2019
28 °C

ಸಿಪಿಎಂ ಮುಖಂಡ ಬಿ. ಮಾಧವ ನಿಧನ

Published:
Updated:
Prajavani

ಮಂಗಳೂರು: ಜಿಲ್ಲೆಯ ಹಿರಿಯ ಸಿಪಿಎಂ ಮುಖಂಡ ಬಿ.ಮಾಧವ (83) ಬುಧವಾರ ನಗರದಲ್ಲಿ ನಿಧನರಾದರು.

ಎಲ್‌ಎಲ್‌ಬಿ ಪದವೀಧರರಾಗಿ, ಎಲ್‌ಐಸಿಯಲ್ಲಿ ವೃತ್ತಿ ಆರಂಭಿಸಿದ್ದ ಅವರು, ವಿಮಾ ನೌಕರರ ಹೋರಾಟದಲ್ಲಿ ಪಾಲ್ಗೊಂಡು ಸ್ವಯಂ ನಿವೃತ್ತಿ ಪಡೆದಿದ್ದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, 9 ವರ್ಷ ಜಿಲ್ಲಾ ಕಾರ್ಯದರ್ಶಿ, ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2009 ರಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !