ಬುಧವಾರ, ಆಗಸ್ಟ್ 4, 2021
22 °C

ಮಳೆಯಿಂದ ಕಾಂಪೌಂಡ್‌ ಕುಸಿದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಲ್ಲಿನ ಗುರುಪುರ ಸಮೀಪದ ಮಠದಗುಡ್ಡೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಳೆಯಿಂದ ಮನೆಯ ಕಾಂಪೌಂಡ್‌ ಕುಸಿದು ಮೈಮೇಲೆ ಬಿದ್ದು ನಾರಾಯಣ ನಾಯ್ಕ (52) ಎಂಬುವವರು ಮೃತಪಟ್ಟಿದ್ದಾರೆ.

ಶುಕ್ರವಾರ ಮಧ್ಯಾಹ್ನ ಗುರುಪುರ ಭಾಗದಲ್ಲಿ ಜೋರಾಗಿ ಮಳೆ ಬೀಳುತ್ತಿತ್ತು. ಆಗ ಮನೆಯ ಪಕ್ಕದ ತೋಡಿನಲ್ಲಿ ಸಿಲುಕಿಕೊಂಡಿದ್ದ ಕಸಕಡ್ಡಿಯನ್ನು ತೆರವು ಮಾಡುವ ಕೆಲಸದಲ್ಲಿ ನಾರಾಯಣ ನಾಯ್ಕ ನಿರತರಾಗಿದ್ದರು. ಅವರದ್ದೇ ಮನೆಗೆ ನಿರ್ಮಿಸಿದ್ದ ಮುರ ಕಲ್ಲಿನ ಕಾಂಪೌಂಡ್‌ ಕುಸಿದು ಮೈಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದರು.

ಮರ ಬಿದ್ದು ಮನೆಗೆ ಹಾನಿ

ಮಂಗಳೂರಿನ ಬೆಂಗ್ರೆಯ ಅಳಿವೆ ಬಾಗಿಲು ಬಳಿಯ ಶಾರದಾ ಅಂಗಾರ ಮೆಂಡನ್ ಎಂಬುವವರ ಮನೆ ಮೇಲೆ ಗುರುವಾರ ತಡರಾತ್ರಿ ತೆಂಗಿನ ಮರ ಬಿದ್ದು ಭಾಗಶಃ ಹಾನಿಗೀಡಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು