ಗುರುವಾರ , ಆಗಸ್ಟ್ 22, 2019
26 °C

ಡೆಂಗಿ ಜ್ವರ ಶಂಕೆ: ಯುವಕ ಸಾವು

Published:
Updated:
Prajavani

ಮಂಗಳೂರು: ಡೆಂಗಿ ಜ್ವರದ ಶಂಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವಕರೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ನಗರದ ಜೆಪ್ಪು ಪಟ್ಣ ನಿವಾಸಿ ಗಣೇಶ್ ಕರ್ಕೇರ (35) ಮೃತ ಯುವಕ. ಜ್ವರದಿಂದ ಬಳಲುತ್ತಿದ್ದ ಅವರು ಮಂಗಳವಾರ ನಗರದ ಕರಂಗಲ್ಪಾಡಿಯ ವಿನಯಾ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಗಣೇಶ್ ಸಾವಿಗೆ ಡೆಂಗಿ ಜ್ವರ ಮತ್ತು ಬಹು ಅಂಗಾಂಗಳ ವೈಫಲ್ಯ ಕಾರಣ ಎಂದು ಆಸ್ಪತ್ರೆಯ ವೈದ್ಯರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಗಣೇಶ್ ಜೆಪ್ಪುವಿನ ಸಾಗರ್ ಟ್ರಾವೆಲ್ಸ್‌ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಜೆಪ್ಪು ಶ್ರೀ ಆದೀಮಹೇಶ್ವರಿ ಭಜನಾ ಮಂದಿರದ ಸದಸ್ಯರಾಗಿದ್ದರು.

Post Comments (+)