ದೇರಳಕಟ್ಟೆ ಜಂಕ್ಷನ್: ಚತುಷ್ಪಥ ರಸ್ತೆಗೆ ಶಿಲಾನ್ಯಾಸ

ಉಳ್ಳಾಲ: ‘ದೇರಳಕಟ್ಟೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಪ್ರದೇಶವಾಗಿದೆ. ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಆಸ್ಪತ್ರೆಯಿಂದ ದೇರಳಕಟ್ಟೆ ಜಂಕ್ಷನ್‍ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯೊಂದಿಗೆ ದೇರಳಕಟ್ಟೆ ಜಂಕ್ಷನ್ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಂಡು ಮಾದರಿ ರಸ್ತೆ ನಿರ್ಮಾಣವಾಗಲಿದೆ’ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.
ದೇರಳಕಟ್ಟೆ ಜಂಕ್ಷನ್‍ನಲ್ಲಿ ₹ 4.5 ಕೋಟಿ ವೆಚ್ಚದಲ್ಲಿ ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಆಸ್ಪತ್ರೆಯಿಂದ ದೇರಳಕಟ್ಟೆ ಜಂಕ್ಷನ್‍ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಮತ್ತು ದೇರಳಕಟ್ಟೆ ಜಂಕ್ಷನ್ ಅಭಿವೃದ್ಧಿಗೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಚೆಂಬುಗುಡ್ಡೆಯಿಂದ ಫಾದರ್ ಮುಲ್ಲರ್ಸ್ ಆಸ್ಪತ್ರೆವರೆಗೆ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದೆ. ದೇರಳಕಟ್ಟೆಯಿಂದ ನಾಟೆಕಲ್ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದ್ದು, ನಾಟೆಕಲ್‍ನಿಂದ ಅಸೈಗೋಳಿವರೆಗಿನ ಕಾಮಗಾರಿ ಪ್ರಗತಿಯಲ್ಲಿದೆ. ತೊಕ್ಕೊಟ್ಟು ಜಂಕ್ಷನ್‍ನಿಂದ ಚೆಂಬುಗುಡ್ಡೆವರೆಗೆ ₹ 12 ಕೋಟಿ ವೆಚ್ಚದಲ್ಲಿ ಮಾದರಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ತೊಕ್ಕೊಟ್ಟಿನಿಂದ ಮುಡಿಪುವರೆಗಿನ ಒಂದು ಹಂತದ ಚತುಷ್ಪಥ ಕಾಮಗಾರಿ ನಡೆದ ಬಳಿಕ ಇಲ್ಲಿನ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಮಾದರಿ ರಸ್ತೆ ಸೌಂದರೀಕರಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್ ಸಿ.ಎಂ., ಮಾಜಿ ಅಧ್ಯಕ್ಷ ಯೂಸುಫ್ ಬಾವ, ಸದಸ್ಯರಾದ ಇಕ್ಬಾಲ್ ಎಚ್. ಆರ್., ಇಬ್ರಾಹಿಂ ಬದ್ಯಾರ್, ರಝಾಕ್ ಕಾನೆಕೆರೆ, ಅಬ್ದುಲ್ ರವೂಫ್ ರೆಂಜಾಡಿ, ಅಬ್ದುಲ್ಲಾ ಎಂ.ಎ., ಹನೀಫ್ ಬದ್ಯಾರ್, ಮಾಜಿ ಸದಸ್ಯರಾದ ಕಬೀರ್ ಡಿ., ಡಿಸಿಸಿ ಸದಸ್ಯರಾದ ರವಿರಾಜ್ ಶೆಟ್ಟಿ , ಅನ್ಸಾರುಲ್ ಮುಸ್ಲಿಂ ಅಧ್ಯಕ್ಷ ಹನೀಫ್ ದೇರಳಕಟ್ಟೆ, ಅಶ್ರಫ್ ರೆಂಜಾಡಿ, ರಿಕ್ಷಾ ಚಾಲಕ ಸಂಘದ ಉಪಾಧ್ಯಕ್ಷ ಸಯ್ಯದ್ ಆಲಿ ದೇರಳಕಟ್ಟೆ, ಕೋಟೆಕಾರು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಪುಷ್ಠಿ, ಅಝೀಝ್ ಆರ್.ಕೆ.ಸಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.