ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದನೆಯ ಸ್ವಲ್ಪ ಭಾಗ ದಾನ, ಸೇವೆಗೆ ವಿನಿಯೋಗಿಸಿ: ದೇವೇಂದ್ರಕೀರ್ತಿ ಸ್ವಾಮೀಜಿ

Published 21 ಸೆಪ್ಟೆಂಬರ್ 2023, 13:50 IST
Last Updated 21 ಸೆಪ್ಟೆಂಬರ್ 2023, 13:50 IST
ಅಕ್ಷರ ಗಾತ್ರ

ಉಜಿರೆ: ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ದಾನ ಮತ್ತು ಸೇವೆಗಾಗಿ ವಿನಿಯೋಗಿಸಬೇಕು ಎಂದು ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮನವರ 34ನೆ ಪುಣ್ಯತಿಥಿ ಸಂದರ್ಭ 704 ವಿದ್ಯಾರ್ಥಿಗಳಿಗೆ ₹17.51 ಲಕ್ಷ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.

ದೇವರು, ಗುರುಗಳು ಮತ್ತು ಶಾಸ್ತ್ರದ ಬಗ್ಗೆ ಗೌರವ ತೋರಿಸಬೇಕು. ಮಾನಕಷಾಯ ತ್ಯಾಗದಿಂದ ಮೃದುತ್ವ ಮತ್ತು ವಿನಯ ಬರುತ್ತದೆ. ವಿದ್ಯೆಯೊಂದಿಗೆ ವಿದ್ಯಾರ್ಥಿಗಳು ತ್ಯಾಗ, ಸೇವೆ ಮತ್ತು ವಿನಯವನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಬಸದಿಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು.

ವಿನಯಾ ಜೆ.ಬಳ್ಳಾಲ್, ಡಾ.ಪ್ರಿಯಾ ಬಳ್ಳಾಲ್, ವಿಜಯಲಕ್ಷ್ಮೀ ಪಿ.ಎನ್.ಆರಿಗಾ, ಕೆ.ರಾಜವರ್ಮ ಬಳ್ಳಾಲ್, ಪ್ರಸನ್ನ ಕುಮಾರ್, ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಂ.ಜಿನರಾಜ ಶೆಟ್ಟಿ ಇದ್ದರು.

ಶಿಕ್ಷಕ ಕೆ.ಧರಣೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಧವಳಾ ಜೈನ್ ವಂದಿಸಿದರು.

ಬಸದಿಯಲ್ಲಿ 108 ಕಲಶ ಅಭಿಷೇಕ, ವಿಶೇಷ ಪೂಜೆಗಳು ನಡೆದವು.

ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಿದರು
ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT