ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಜಿರೆ: ಡಿ.29ರಿಂದ ಧಾಮ ಸಂಪ್ರೋಕ್ಷಣಾ ಮಹೋತ್ಸವ

Published 18 ಡಿಸೆಂಬರ್ 2023, 13:22 IST
Last Updated 18 ಡಿಸೆಂಬರ್ 2023, 13:22 IST
ಅಕ್ಷರ ಗಾತ್ರ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿ ಗ್ರಾಮದ ಭಗವಾನ್ ಶ್ರೀನೇಮಿನಾಥಸ್ವಾಮಿ ಬಸದಿ ಶಿಲಾಮಯವಾಗಿ ನವೀಕರಣಗೊಂಡಿದ್ದು, ಡಿ.29ರಿಂದ 31ರವರೆಗೆ ನೇಮಿನಾಥ ಸ್ವಾಮಿ ಮೂರ್ತಿಯ ಪುನರ್‌ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.

ಡಿ.29ರಂದು ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ನಾಂದಿಮಂಗಲ ಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ, ಭಗವಾನ್ ನೇಮಿನಾಥಸ್ವಾಮಿಗೆ ಅಭಿಷೇಕ, ಮಹಾಪೂಜೆ ನಡೆಯಲಿದೆ. ಡಿ.30ರಂದು ವಾಸ್ತುಪೂಜಾ ವಿಧಾನ, ನಾಗಪ್ರತಿಷ್ಠೆ, ಪದ್ಮಾವತಿದೇವಿಯ ಪ್ರತಿಷ್ಠೆ, ಕುಂಕುಮಾರ್ಚನೆ, ಅಭಿಷೇಕ, ಮಹಾಪೂಜೆ ನಡೆಯಲಿದೆ. 31ರಂದು ಅಷ್ಟದಿಕ್ಕು ಧಾಮಸಂಪ್ರೋಕ್ಷಣೆ, ಬೆಳಿಗ್ಗೆ 10.45ಕ್ಕೆ ಭಗವಾನ್ ನೇಮಿನಾಥಸ್ವಾಮಿಯ ಪ್ರತಿಷ್ಠಾ ಮಹೋತ್ಸವ, ಶಿಖರಾರೋಹಣ, ಮಧ್ಯಾಹ್ನ ಅಗ್ರೋದಕ ಮೆರವಣಿಗೆ, ಭಗವಾನ್ ನೇಮಿನಾಥಸ್ವಾಮಿಗೆ 216 ಕಲಶಗಳಿಂದ ಮಹಾಭಿಷೇಕ,  ಮಹಾಮಂಗಳಾರತಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಕುಟುಂಬಸ್ಥರು ಸೇವಾಕರ್ತರಾಗಿದ್ದಾರೆ.

ಡಿ.29ರಂದು ಸಂಜೆ 5ರಿಂದ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಚಿವ ಡಿ.ಸುಧಾಕರ್ ಭಾಗವಹಿಸುವರು. ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡುವರು.

ಡಿ.30ರಂದು ಸಂಜೆ 5ರಿಂದ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನಮಠದ ದೇವೇಂದ್ರಕೀರ್ತಿಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.

ಡಿ.31ರಂದು ಸಂಜೆ 5ರಿಂದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಮೂಲ್ಕಿ ಸೀಮೆಯ ಅರಸ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸುವರು. ಪ್ರತಿ ದಿನ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT