ಭಾನುವಾರ, ನವೆಂಬರ್ 27, 2022
20 °C

75ನೇ ವರ್ಷಕ್ಕೆ ಕಾಲಿಟ್ಟ ವೀರೇಂದ್ರ ಹೆಗ್ಗಡೆ: ಸರಳ ಆಚರಣೆ, ಶುಭಾಶಯಗಳ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ 74ನೇ ಜನ್ಮದಿನವನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಸರಳವಾಗಿ ಆಚರಿಸಲಾಯಿತು.

ದೇವಳದ ನೌಕರರು, ಊರಿನ ನಾಗರಿಕರು, ಭಕ್ತರು, ಅಭಿಮಾನಿಗಳು ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯ ಅರ್ಪಿಸಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್.ಡಿ.ಸಂಪತ್ ಸಾಮ್ರಾಜ್ಯ ಶಿರ್ತಾಡಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಗ್ಗಡೆ ಅವರಿಗೆ ಶುಭಾಶಯ ಸಲ್ಲಿಸಿದರು.

ಹೆಗ್ಗಡೆ ಅವರಿಗೆ ದೂರವಾಣಿ, ವಿದ್ಯುದಂಚೆ, ಪತ್ರಗಳ ಮೂಲಕವೂ ಶುಭಾಶಯಗಳು ಹರಿದು ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು