ಕೊಯಿಲ (ಉಪ್ಪಿನಂಗಡಿ): ಅಲ್ಲಾಹುವಿನ ಹೆಸರಿನಲ್ಲಿ ಸ್ವಲಾತ್, ದ್ಸಿಕ್ರ್ ನಾಮಸ್ಮರಣೆ ಮಾಡುವುದರಿಂದ ಅದು ನಮ್ಮನ್ನು ಒಳಿತಿನ ಕಡೆಗೆ ಕರೆದೊಯ್ಯಲಿದೆ. ಜೊತೆಗೆ ಅಂತಃಕರಣವೂ ಶುದ್ಧವಾಗುತ್ತದೆ ಎಂದು ಸಮಸ್ತ ಕೇಂದ್ರ ಮುಶಾವರ ಅಬ್ದುಲ್ ಖಾದರ್ ಉಸ್ತಾದ್ ಬಂಬ್ರಾಣ ಹೇಳಿದರು.

ಆತೂರು ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ದ್ಸಿಕ್ರ್ ಹಲ್ಕಾದ 25ನೇ ವಾರ್ಷಿಕ ಸಂಭ್ರಮದ ಸಮಾರೋಪ ಸಮಾರಂಭವನ್ನು ಗುರುವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು.

ದ್ಸಿಕ್ರ್ ಹಲ್ಕಾದ ನೇತೃತ್ವ ವಹಿಸಿರುವ ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಅಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ, 25 ವರ್ಷಗಳಿಂದ ನಡೆಯುತ್ತಿರುವ ದ್ಸಿಕ್ರ್ ಹಲ್ಕಾ ವಿಷೇಷ ಪಾವಿತ್ರ್ಯ ಹೊಂದಿದ್ದು, ಹಲವು ಮಂದಿ ತಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ಧಾರ್ಮಿಕ ಉಪನ್ಯಾಸ ನೀಡಿದರು.

ಕಡಬ ತಾಲ್ಲೂಕು ಜಮಿಯತ್ಉಲ್ ಖುತುಬಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ದಾರಿಮಿ, ಆತೂರು ವಲಯ ಜಮೀಯತ್ಉಲ್ ಮುಅಲ್ಲಿಮೀನ್ ಅಧ್ಯಕ್ಷ ಸತ್ತಾರ್ ಅಸ್ನವಿ, ವಿಖಾಯ ಸಂಯೋಜಕ ಇಸ್ಮಾಯಿಲ್ ತಂಙಳ್, ಹಳೆನೇರೆಂಕಿ ಖತೀಬ್ ರಫೀಕ್ ಅರ್ಷದಿ, ಶಕ್ತಿನಗರ ಮದ್ರಸ ಸದರ್ ಮುಅಲ್ಲಿಂ ಅಬ್ದುಲ್ಲ ಮುಸ್ಲಿಯಾರ್, ನೀರಾಜೆ ಮದ್ರಸದ ಶೌಕತ್ ಆಲಿ ಅಸ್ಲಮಿ, ಆತೂರು ವಲಯ ಮದ್ರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಮಹಮ್ಮದ್ ರಫೀಕ್, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹಮದ್ ಕುಞಿ, ಪದಾಧಿಕಾರಿಗಳಾದ ಸಿರಾಜುದ್ದೀನ್, ಎನ್.ಎ. ಇಸಾಕ್, ಅಬ್ದುಲ್ ಅಝೀಝ್ ಬಿ.ಕೆ., ನಝೀರ್ ಎನ್.ಕೆ., ಕುಂಡಾಜೆ ಮಸೀದಿ ಅಧ್ಯಕ್ಷ ಶಾಹುಲ್ ಹಮೀದ್, ಬದ್ರಿಯಾ ಸ್ಕೂಲ್ ಮುಖ್ಯ ಶಿಕ್ಷಕ ಹಂಝ ಸಖಾಫಿ, ಮಾಜಿ ಸಂಚಾಲಕ ಪಿ.ಆದಂ, ಮಾಜಿ ಉಪಾಧ್ಯಕ್ಷ ಪೊಡಿಕುಞಿ ನೀರಾಜೆ, ನೀರಾಜೆ ಮದ್ರಸದ ಅಧ್ಯಕ್ಷ ಎನ್.ಸಿದ್ದಿಕ್, ಆತೂರುಬೈಲ್ ಮದ್ರಸದ ಅಧ್ಯಕ್ಷ ಸುಲೈಮಾನ್, ಗಂಡಿಬಾಗಿಲು ಮಸೀದಿಯ ಹಸೈನಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.