ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ಲಿ ‘ಅರೆಬಾಸೆ’ ಬಂದದೆ ಗಡ

ಅರೆಭಾಷೆ ಸಂಸ್ಕೃತಿ–ಸಾಹಿತ್ಯದ ಡಿಜಿಟಲೀಕರಣ
Last Updated 23 ಜೂನ್ 2022, 13:58 IST
ಅಕ್ಷರ ಗಾತ್ರ

ಮಂಗಳೂರು: ಕಾಗದ–ಮುದ್ರಣದ ಬೆಲೆಯೇರಿಕೆ ಬಿಸಿ ನಡುವೆಯೇ ತಂತ್ರಜ್ಞಾನ ಬೆಳವಣಿಗೆಯನ್ನು ಅಪ್ಪಿಕೊಂಡು, ಸಾಹಿತ್ಯ ಉಳಿಸಿ–ಬೆಳೆಸುವ ನೆಲೆಯಲ್ಲಿ ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ‘ಡಿಜಿಟಲೀಕರಣ’ದತ್ತ ಹೆಜ್ಜೆ ಇಟ್ಟಿದೆ.

ದಶಮಾನೋತ್ಸವ ಆಚರಿಸುತ್ತಿರುವ ಅಕಾಡೆಮಿಯು ಅರೆಭಾಷಾ ಸಾಹಿತ್ಯದಕೃತಿಗಳು, ಪತ್ರಿಕೆಸೇರಿದಂತೆ ಮೌಲಿಕಸಾಹಿತ್ಯವನ್ನು ಒಳಗೊಂಡ 84 ಕೃತಿಗಳನ್ನು ಡಿಜಟಲೀಕರಣಗೊಳಿಸಿದ್ದು, ಅಂತರ್ಜಾಲ (https://arebashe.sanchaya.net) ದಲ್ಲಿ ಪ್ರಕಟಿಸಿದೆ. ಜೂ.25ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.ಆ ಮೂಲಕ ಕರಾವಳಿ –ಮಲೆನಾಡಿನಲ್ಲಿ ಕೇಳಿ ಬರುವ ‘ಅರೆಭಾಷೆ’ ವಿಶ್ವವ್ಯಾಪ್ತಿಯಾಗಲಿದೆ.

ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಸೇರಿದಂತೆ ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ಕೇಳಿ ಬರುವ ಅರೆಭಾಷೆಯನ್ನು ಅರೆಬಾಸೆ, ಅರೆಗನ್ನಡ, ಗೌಡ ಕನ್ನಡ ಅಂತಲೂ ಕರೆಯುತ್ತಾರೆ. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಅರೆಭಾಷೆಯುಐದು ಶತಮಾನಗಳ ಇತಿಹಾಸ ಹೊಂದಿದೆ ಎನ್ನುತ್ತಾರೆ ಸಂಶೋಧಕರು.

‘ಅರೆಭಾಷೆ ಮತ್ತು ಅದರ ಸಂಸ್ಕೃತಿಗೆ ಸಂಬಂಧಿಸಿದ ಸಾಹಿತ್ಯವು ಓದುಗರಿಗೆ ಮುಕ್ತ ಮತ್ತು ಉಚಿತವಾಗಿ ದೊರೆಯಬೇಕು. ಈ ನೆಲೆಯಲ್ಲಿ ಅಕಾಡೆಮಿಯು ಜನಸ್ನೇಹಿ ಹಾಗೂ ಪರಿಸರಸ್ನೇಹಿ ಯೋಜನೆ ಹಮ್ಮಿಕೊಂಡಿದೆ. ಇದು ಆರಂಭ, ವಿಸ್ತರಿಸುತ್ತಾ ಹೋಗುತ್ತೇವೆ’ ಎನ್ನುತ್ತಾರೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ.

‘ಆಕಾಡೆಮಿ ಪ್ರಕಟಿಸಿದ 38 ಪುಸ್ತಕಗಳು, 23 ತ್ರೆಮಾಸಿಕ ಪತ್ರಿಕೆ (ಹಿಂಗಾರ) ಮತ್ತು ವಿವಿಧ ಲೇಖಕರ 21 ಕೃತಿಗಳು ಸೇರಿ ಒಟ್ಟು 84 ಕೃತಿಗಳು ಡಿಜಿಟಲೀಕರಣಗೊಂಡಿವೆ. ಜೊತೆಗೆ ಪಟ್ಟಡ ಪ್ರಭಾಕರ ಸಂಪಾದಿಸಿ ಪ್ರಕಟಿಸುತ್ತಿದ್ದ ‘ಕೊಡಗು ಸಂಗಾತಿ’ ಪಾಕ್ಷಿಕದ 142 ಸಂಚಿಕೆಗಳಿವೆ. 1968ರಲ್ಲಿ ಪ್ರಕಟವಾದ ಗೌಡ ಸಮಾಜದ ಸಂಸ್ಕೃತಿಯಿಂದ ಇತ್ತೀಚೆಗಿನ ಅಕಾಡೆಮಿ ಪ್ರಕಟಿತ ಪುಸ್ತಕಗಳಿವೆ’ಎಂದು ಅಕಾಡೆಮಿ ಸದಸ್ಯ ಭರತೇಶ ಅಲಸಂಡೆಮಜಲುಮಾಹಿತಿನೀಡಿದರು.

ಮುಖ್ಯವಾಗಿ ಸಂಪಾಜೆಯ ಎನ್.ಎಸ್. ದೇವಿಪ್ರಸಾದರ ‌‘ಅಮರ ಸುಳ್ಯದ ಸ್ವಾತಂತ್ರ್ಯ ಸಮರʼ, ಪ್ರೊ. ಕೋಡಿ ಕುಶಾಲಪ್ಪ ಗೌಡರ ʼಗೌಡ ಕನ್ನಡʼ, ಕೆ. ಅರ್‌. ಗಂಗಾಧರರ ಅರೆಭಾಷೆ-ಕನ್ನಡ-ಇಂಗ್ಲಿಷ್‌ ಶಬ್ದಕೋಶ, ಡಾ.ವಿಶ್ವನಾಥ ಬದಿಕಾನರ ಅರೆಭಾಷೆಯ ಜನಪದ ಕತೆಗಳು, ಡಾ. ಪುರುಷೋತ್ತಮ ಬಿಳಿಮಲೆಯವರ 'ಕರಾವಳಿ ಜಾನಪದʼವೆಂಬ ಪುಸ್ತಕಗಳಿವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT