ಪುತ್ತೂರಿನಲ್ಲಿ ಜನಮನ ಗೆದ್ದ 'ವಿಶ್ವಮಾತಾ ಗೋಮಾತಾ' ಪ್ರದರ್ಶನ

7

ಪುತ್ತೂರಿನಲ್ಲಿ ಜನಮನ ಗೆದ್ದ 'ವಿಶ್ವಮಾತಾ ಗೋಮಾತಾ' ಪ್ರದರ್ಶನ

Published:
Updated:
Deccan Herald

ಪುತ್ತೂರು: ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಯೋಗಾಶ್ರಮದ ವತಿಯಿಂದ ಪುತ್ತೂರು ಶ್ರೀ ಲಕ್ಷ್ಮಿವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ಸೋಮವಾರ ಸಂಜೆ ನಡೆದ ‘ವಿಶ್ವಮಾತಾ ಗೋಮಾತಾ’ ನೃತ್ಯ ನಾಟಕ ನಡೆಯಿತು.

ದೇಸಿತಳಿಯ ಗೋವಿನ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ದೇಸಿತಳಿಯ ಗೋವಿನ ರಕ್ಷಣೆ ಹಾಗೂ ಗೋಸಂರಕ್ಷಣೆಯ ಸಂದೇಶ ಸಾರುವ ಈ ನೃತ್ಯ ನಾಟಕ ಸೇರಿದ್ದ ಗೋಪ್ರೇಮಿಗಳ ಮನಗೆದ್ದಿತು. ಗೋಸಂತತಿ ನಾಶದಿಂದ ಭವಿಷ್ಯದಲ್ಲಿ ಅಪಾಯ ಎದುರಾಗುವ ಸಾಧ್ಯತೆಯನ್ನು ಮನಗಂಡು ಕಳೆದ ಅನೇಕ ಸಮಯಗಳಿಂದ ಗೋವಿನ ಸಂರಕ್ಷಣೆಗೆ ನಾಟಕದ ಮೂಲಕ ಜಾಗೃತಿ ಮೂಡಿಸುವ ಕೆಲಸ ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಯೋಗಾಶ್ರಮದ ಮೂಲಕ ನಡೆಸಲಾಗುತ್ತಿದೆ. ನಾಟಕದ ಕೊನೆಗೆ ಗೋಸಂತತಿ ಉಳಿಸುವ ಸಂದೇಶ ಹಾಗೂ ಪ್ರಮಾಣವಚನ ಸ್ವೀಕರಿಸಲಾಯಿತು.

ಉದ್ಘಾಟಿಸಿ ಮಾತನಾಡಿದ ಕಿನ್ನಿಗೋಳಿ ಶ್ರೀಶಕ್ತಿದರ್ಶನ ಯೋಗಾಶ್ರಮದ ದೇವಬಾಬಾ, ‘ಗೋವಿದ್ದಲ್ಲಿ ನಾನಿದ್ದೇನೆ ಎಂದು ಶ್ರೀಕೃಷ್ಣ ಪರಮಾತ್ಮ ಹಿಂದೆ ಹೇಳಿದ್ದ.ಹೀಗಾಗಿ ಗೋವು ಇದ್ದರೆ ಕೃಷ್ಣನೂ ಇರುವುದು ಸತ್ಯ. ಹಿಂದೆ ಮನೆ , ಮಠಗಳಲ್ಲಿ ಗೋವುಗಳು ಇತ್ತು.ಇಂದು ಎಲ್ಲೆಡೆಯೂ ಮಾಯವಾಗಿದೆ. ಮಲೆನಾಡು ಗಿಡ್ಡ ಶ್ರೇಷ್ಠ ಗೋವು.ಕಪಿಲ ದನ,ಗೀರ್ ದನಗಳ ಹಾಲಿನಲ್ಲಿ ಬಂಗಾರದ ಅಂಶ ಇದೆ.ಇಂದಿನ ಮಿಶ್ರ ತಳಿ ಗೋವಿನ ಹಾಲು, ಎಲ್ಲಾ ರೋಗಗಳಿಗೆ ಕಾರಣವಾಗಿದೆ. ಗೋವುಗಳ ರಕ್ಷಣೆ ಅಗತ್ಯ’ ಎಂದರು.

ಎಸ್‌ಡಿಪಿ ರೆಮಿಡೀಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ಪುತ್ತೂರು ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಭಕ್ತ, ವಕೀಲ ಜಯಾನಂದ ಕೆ, ಹರಿಕೃಷ್ಣ ಕಾಮತ್, ಎಂಜಿನಿಯರ್ ಪ್ರಸನ್ನ ಎನ್ ಭಟ್ , ಸುಹಾಸ ಮರಿಕೆ , ಶಿವಸುಬ್ರಹ್ಮಣ್ಯ ಪೆಲತ್ತಡ್ಕ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !