ಮಂಗಳೂರು: ‘ಮಾದಕ ಪದಾರ್ಥ ಮಾರಾಟ ದಂಧೆಯ ಆರೋಪಿಗಳಲ್ಲಿ ಶೇ 95ಕ್ಕೂ ಅಧಿಕ ಮಂದಿ ಅಲ್ಪಸಂಖ್ಯಾತ ಸಮುದಾಯದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂತಹ ಪ್ರಕರಣದಲ್ಲಿ ಕೇವಲ ಡ್ರಗ್ಸ್ ಮಾರಾಟದ ಆರೊಪಿಯನ್ನು ಬಂಧಿಸಿದರೆ ಸಾಲದು. ಕೈ ಜೋಡಿಸಿದವೆಲ್ಲರನ್ನೂ ಬಂಧಿಸಬೇಕು ಎಂದು ಸಲಹೆ ನೀಡಿದ್ದೇನೆ’ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದರು.

ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಸೋಮವಾರ ಮಾತನಾಡಿದರು.

'ಅಂಕಿ–ಅಂಶ ತೋರಿಸಲಷ್ಟೇ ಡ್ರಗ್ ಪೆಡ್ಲರ್ಗಳನ್ನು ಪೋಲೀಸರು ಬಂಧಿಸುತ್ತಾರೆ. ಪ್ರಕರಣದ ಆಳವಾದ ತನಿಖೆ ನಡೆಸುವುದಿಲ್ಲ. ಆರೋಪಿ ಆ ದಂಧೆಗೆ ಮನೆಯವರು ನೆರವಾಗಿದ್ದರೆ ಅವರನ್ನು ಬಂಧಿಸಬೇಕು. ಆತ ತಲೆಮರೆಸಿಕೊಳ್ಳಲು ನೆರವಾಗುವ ಸಂಬಂಧಿಕರನ್ನೂ ಬಂಧಿಸಬೇಕು. ಒಂದು ಪ್ರಕರಣದಲ್ಲಿ 10ಕ್ಕೂ ಹೆಚ್ಚು ಮಂದಿಯ ಬಂಧನವಾದರೆ ಇಂತಹ ದಂಧೆ ನಿಯಂತ್ರಣಕ್ಕೆ ಬರುತ್ತದೆ’ ಎಂದರು.

‘ಕೋಮುಗಲಭೆ ತಡೆಯಲು ಮೊಹಲ್ಲಾಗಳಲ್ಲಿ ಸಭೆ ನಡೆಸಬೇಕು. ಸ್ಥಳೀಯ ಗೌರವಯುತ ವ್ಯಕ್ತಿಗಳಿಂದ ಜನರಿಗೆ ತಿಳಿವಳಿಕೆ ಮೂಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.