ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಸಂಸ್ಥೆ ಬದುಕು ರೂಪಿಸುವ ಕೇಂದ್ರಗಳಾಗಲಿ

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
Published 30 ಏಪ್ರಿಲ್ 2024, 5:16 IST
Last Updated 30 ಏಪ್ರಿಲ್ 2024, 5:16 IST
ಅಕ್ಷರ ಗಾತ್ರ

ಮುಡಿಪು: ಹಣ ಗಳಿಕೆ, ಐಷಾರಾಮಿ ಬದುಕಿನಿಂದ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಉದ್ದೇಶಿತ ಗುರಿ, ಪರಿಶ್ರಮದೊಂದಿಗೆ ಮುನ್ನಡೆದು ನೆಮ್ಮದಿ, ಸಂತೋಷ ಹಾಗೂ ಸಂತೃಪ್ತ ಜೀವನ ನಮ್ಮದಾದರೆ ಅದು ಬದುಕಿನ ನಿಜವಾದ ಯಶಸ್ಸು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

ಮುಡಿಪುವಿನ ಜವಹಾರ್ ನವೋದಯ ಕೇಂದ್ರೀಯ ವಿದ್ಯಾಲಯದ 23ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳನ್ನು ಹೊರ ತರುವ ಕಾರ್ಖಾನೆಗಳಾಗದೆ ಅವರ ಬದುಕನ್ನು ರೂಪಿಸುವ ಕೇಂದ್ರಗಳಾಗಬೇಕು. ಮುಡಿಪುವಿನ ನವೋದಯ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಬದುಕಿಗೆ ಪ್ರೇರಪಣೆ ಒದಗಿಸುವ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ಮುಡಿಪುವಿನ ಜವಹಾರ್ ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯ ಮೂಲಕ ಫೈವ್‌ ಸ್ಟಾರ್‌ ಮಾನ್ಯತೆ ದೊರಕಿದ್ದು, ಜಿಲ್ಲಾಧಿಕಾರಿ ಈ ಕುರಿರು ಘೋಷಣೆ ಮಾಡಿದರು.

ಜವಹಾರ್ ನವೋದಯ ವಿದ್ಯಾಲಯದ ಹೈದಾರಾಬಾದ್‌ ವಲಯದ ಉಪ ಆಯುಕ್ತ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೆಂದರೆ ಕೇವಲ ಓದು ಮಾತ್ರವಲ್ಲ. ಅದರೊಂದಿಗೆ ಕ್ರೀಡೆ,‌ ಸಾಂಸ್ಕೃತಿಕ ರಂಗ, ಎನ್‌ಸಿಸಿ ಸೇರಿದಂತೆ ಅವರ ಬದುಕಿಗೆ ಪೂರಕವಾಗುವ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತಾಗಬೇಕು. ನವೋದಯ ವಿದ್ಯಾಲಯದಲ್ಲಿ ಇಂಥ ಅವಕಾಶಗಳಿದ್ದು, ರಾಷ್ಟ್ರಮಟ್ಟದಲ್ಲಿ ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಎಂಸಿ ಸದಸ್ಯರಾದ ಪ್ರೊ.ಜಗದೀಶ್ ಪ್ರಸಾದ್, ಕೃಷ್ಣಪ್ರಸಾದ್ ಅವರನ್ನು ಗೌರವಿಸಲಾಯಿತು.

ಪ್ರಾಂಶುಪಾಲ ಪಿ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪಪ್ರಾಂಶುಪಾಲರಾದ ರೇಖಾ ಅಶೋಕ್ ಸ್ವಾಗತಿಸಿದರು. ಕೆ.ಪಿ.ರಾಘವನ್ ವಂದಿಸಿದರು.

ಮುಡಿಪುವಿನ ನವೋದಯ ವಿದ್ಯಾಲಯದ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಚೆಂಡೆ ನವಾದನ ಮಾಡಿದರು
ಮುಡಿಪುವಿನ ನವೋದಯ ವಿದ್ಯಾಲಯದ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಚೆಂಡೆ ನವಾದನ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT