ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಕುಮೇರು ಕೆ. ಗೋವಿಂದ ಭಟ್‌ರ ‘ಎಪ್ಪತ್ತು ತಿರುಗಾಟಗಳು’ ಕೃತಿ ಬಿಡುಗಡೆ ನ25ಕ್ಕೆ

Last Updated 24 ನವೆಂಬರ್ 2021, 2:14 IST
ಅಕ್ಷರ ಗಾತ್ರ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಅವರ ‘ಎಪ್ಪತ್ತು ತಿರುಗಾಟಗಳು’ ಕೃತಿ ಬಿಡುಗಡೆ ಕಾರ್ಯಕ್ರಮವು ನ.25ರಂದು ಮಧ್ಯಾಹ್ನ 2.30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಭವನದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ರಾಂತ ಅಧಿಕಾರಿ ಟಿ. ಶ್ಯಾಮ ಭಟ್, ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಲ್. ಸಾಮಗ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆಫಾ ಮೆಲ್ವಿನ್ ಜೋಸೆಫ್ ಪಿಂಟೊ, ಕೃತಿಕಾರ ಸೂರಿಕುಮೇರು ಕೆ. ಗೋವಿಂದ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸಂಜೆ 4 ಗಂಟೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ತ್ಯಾಗಮೇವ ಜಯತೇ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದರು. ಸೂರಿಕುಮೇರು ಕೆ. ಗೋವಿಂದ ಭಟ್ ಅವರು ದಾಖಲೆಯ 70 ವರ್ಷಗಳ ಕಾಲ ಮೇಳದ ತಿರುಗಾಟ ನಡೆಸಿದ್ದಾರೆ. ಧರ್ಮಸ್ಥಳ ಮೇಳವೊಂದರಲ್ಲೇ 54 ವರ್ಷ ಬಣ್ಣ ಹಚ್ಚಿದ್ದಾರೆ. 80 ವರ್ಷದ ಗೋವಿಂದ ಭಟ್, ತಮ್ಮ ಯಕ್ಷ ಪಯಣದ ನೋವು- ನಲಿವು, ಏಳು-ಬೀಳುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಸಂತ ಅಲೋಶಿಯಸ್ ಪ್ರಕಾಶನ ಇದನ್ನು ಪ್ರಕಟಿಸಿದೆ ಎಂದು ಹೇಳಿದರು.

ಕಾಲೇಜಿನ ಯುಜಿಸಿ ಸ್ಟ್ರೈಡ್ ಯೋಜನೆ ನಿರ್ದೇಶಕ ಡಾ. ಆಲ್ವಿನ್ ಡೇಸಾ, ಅಲೋಶಿಯಸ್ ಪ್ರಕಾಶನ ನಿರ್ದೇಶಕಿ ಡಾ. ವಿದ್ಯಾ ವಿನುತಾ ಡಿಸೋಜ, ಕಾರ್ಯಕ್ರಮ ಸಂಯೋಜಕ ಡಾ. ದಿನೇಶ್ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT