ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಬೆಂಕಿಗಾಹುತಿ: 10 ಮೀನುಗಾರರ ರಕ್ಷಣೆ

Published 5 ಆಗಸ್ಟ್ 2024, 10:05 IST
Last Updated 5 ಆಗಸ್ಟ್ 2024, 10:05 IST
ಅಕ್ಷರ ಗಾತ್ರ

ಮಂಗಳೂರು: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಫಾವಿ ಎಂಬ ಟ್ರಾಲ್ ಬೋಟ್‌ಗೆ ಸೋಮವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ದೋಣಿಯ ಮೀನುಗಾರರು ರಕ್ಷಿಸಿದ್ದಾರೆ.

ಹೊಸಬೆಟ್ಟುವಿನ ರಶೀದಾ ಅವರಿಗೆ ಸೇರಿದ ಮೀನುಗಾರಿಕಾ ದೋಣಿ ಇದಾಗಿದೆ. ಮೀನುಗಾರಿಕಾ ರಜೆ ಮುಗಿದು ಆ.1 ರಿಂದ ಭಾನುವಾರ ಮೀನುಗಾರಿಕಾ ಋತು ಆರಂಭವಾಗಿತ್ತು. ದೋಣಿಯು ಭಾನುವಾರ ಮೀನುಗಾರಿಕೆಗೆ ತೆರಳಿತ್ತು.

2017 ರಲ್ಲಿ ಈ ದೋಣಿಯನ್ನು ನೋಂದಣಿ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT