ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಇನ್ನೂ ಹಾರದ ವಿಮಾನ

ದೇಶೀಯ ನಾಗರಿಕ ವಿಮಾನಯಾನಕ್ಕೆ ಇಂದಿನಿಂದ ಅನುಮತಿ
Last Updated 25 ಮೇ 2020, 11:55 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ದೇಶೀಯ ನಾಗರಿಕ ವಿಮಾನಯಾನ ಸೋಮವಾರದಿಂದ ಆರಂಭಗೊಂಡಿದ್ದರೂ, ಪ್ರಯಾಣಿಕರ ಕೊರತೆಯಿಂದಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆಯ ತನಕ ಯಾವುದೇ ವಿಮಾನಗಳು ಹಾರಾಟ ನಡೆಸಲಿಲ್ಲ.

ಸೋಮವಾರ ಆರು ವಿಮಾನಗಳ ಆಗಮನ ಮತ್ತು ನಿರ್ಗಮನ ನಿಗದಿಯಾಗಿತ್ತು. ಈ ಪೈಕಿ ಮುಂಬೈ– 2, ಚೆನ್ನೈ ಮತ್ತು ಬೆಂಗಳೂರಿನ ತಲಾ ಒಂದು ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದಾಗಿದೆ. ಸಂಜೆ ಬೆಂಗಳೂರಿನಿಂದ 2 ವಿಮಾನಗಳ ಆಗಮನ ಮತ್ತು ನಿರ್ಗಮನ ಮಾತ್ರ ನಿಗದಿಯಾಗಿದೆ.

ಬೆಳಿಗ್ಗೆ 8.35ಕ್ಕೆ ಮುಂಬೈಯಿಂದ (ಎಸ್‌ಜಿ0356), 10ಕ್ಕೆ ಬೆಂಗಳೂರಿನಿಂದ (ಎಸ್‌ಜಿ1035), 11ಕ್ಕೆ ಮುಂಬೈಯಿಂದ (6ಇ5327) ಹಾಗೂ ಸಂಜೆ 7.35ಕ್ಕೆ ಚೆನ್ನೈನಿಂದ (6ಇ7141) ಆಗಮಿಸಬೇಕಿದ್ದ ವಿಮಾನಗಳು ರದ್ದಾಗಿವೆ.

ಹೀಗಾಗಿ, ಬೆಳಿಗ್ಗೆ 9.05ಕ್ಕೆ ಮುಂಬೈಗೆ (ಎಸ್‌ಜಿ0353), 10.20ಕ್ಕೆ ಬೆಂಗಳೂರಿಗೆ (ಎಸ್‌ಜಿ1027), 11.40 ಮುಂಬೈಗೆ (6ಇ5328) ಮತ್ತು ರಾತ್ರಿ 8.05ಕ್ಕೆ ಚೆನ್ನೈಗೆ (6ಇ7139) ವಿಮಾನಗಳ ನಿರ್ಗಮನವೂ ರದ್ದಾಗಿವೆ.

ಸದ್ಯ ಬೆಂಗಳೂರಿನಿಂದ ಸಂಜೆ 6.55ಕ್ಕೆ (6ಇ0279) ಮತ್ತು ರಾತ್ರಿ 09.15ಕ್ಕೆ (ಎಸ್‌ಜಿ3743) ಎರಡು ವಿಮಾನಗಳ ಆಗಮನ ನಿಗಿದಿಯಾಗಿದ್ದು, ಸಂಜೆ 7.35ಕ್ಕೆ (ಎಸ್ಇ388) ಮತ್ತು ರಾತ್ರಿ 9.50ಕ್ಕೆ (ಎಸ್‌ಜಿ3744) ಮಂಗಳೂರಿನಿಂದ ವಾಪಸ್ ನಿರ್ಗಮಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT