ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಕಾರು: ಬೋನಿಗೆ ಬಿದ್ದ ಚಿರತೆ

Published 27 ನವೆಂಬರ್ 2023, 13:37 IST
Last Updated 27 ನವೆಂಬರ್ 2023, 13:37 IST
ಅಕ್ಷರ ಗಾತ್ರ

ಬಜಪೆ: ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಭಾನುವಾರ ಬಿದ್ದಿದೆ.

ಎಕ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸುಲೆಪದವು ಎಂಬಲ್ಲಿ ಮನೆಯೊಂದರ ಬಳಿ ಅರಣ್ಯ ಇಲಾಖೆ ಬೋನು ಇರಿಸಿತ್ತು.

ಗ್ರಾಮದಲ್ಲಿ ಚಿರತೆಯ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಗೊಂಡಿದ್ದರು. ಗ್ರಾಮಸ್ಥರಾದ ಯೋಗೀಶ್ ಎಂಬುವರ ಸಾಕು ನಾಯಿಯನ್ನು ಕೊಂದು ಹಾಕಿತ್ತು. ಯೋಗೀಶ್ ಅವರು ಅರಣ್ಯ ಇಲಾಖೆಗೆ ಈ ಸಂಬಂಧ ಮನವಿ ಮಾಡಿದ್ದರು.

ವಲಯ ಅರಣ್ಯಾಧಿಕಾರಿ ರಾಜೇಶ್, ಉಪವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಬೀಟ್ ಅರಣ್ಯ ರಕ್ಷಕ ರೋಹಿತ್, ಶಿವಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT