ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಸಿರಿಗೆ ಪುರಸ್ಕಾರದ ಗರಿ

ಮಂಗಳೂರು ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ
Published 5 ಅಕ್ಟೋಬರ್ 2023, 6:12 IST
Last Updated 5 ಅಕ್ಟೋಬರ್ 2023, 6:12 IST
ಅಕ್ಷರ ಗಾತ್ರ

ಕುಕನೂರು: ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ, ನರೇಗಾ ಯೋಜನೆಯ ಉತ್ತಮ ಪ್ರಗತಿ, ಗ್ರಾಮ ಆರೋಗ್ಯ ಯೋಜನೆ ಅಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ, ಕಂದಾಯ ವಸೂಲಿ, ಕುಡಿಯುವ ನೀರು ಪೂರೈಕೆ, ವಸತಿ ಯೋಜನೆಗಳಲ್ಲಿ ಗ್ರಾಮ ಪಂಚಾಯಿತಿ ಉತ್ತಮ ಸಾಧನೆ ತೋರಿದೆ.

ಗ್ರಾಮ ಪಂಚಾಯಿತಿ ಯೋಜನೆಗಳು, ಅಭಿವೃದ್ಧಿ ಹಾಗೂ ವ್ಯವಹಾರದ ಸಮಗ್ರ ಮಾಹಿತಿಯನ್ನು ಪಂಚತಂತ್ರದ ವೆಬ್‌‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಆನ್‌ಲೈನ್‌ ಮೂಲಕ ಹಣದ ವ್ಯವಹಾರ ಮಾಡಲಾಗುತ್ತದೆ.

ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿ ಗ್ರಾಮಸ್ಥರೂ ಹರ್ಷ ವ್ಯಕ್ತ ಪಡಿಸಿದ್ದಾರೆ. ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಬೇಕು ಎಂದು ಗ್ರಾಮದ ಮುಖಂಡ ರವೀಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರು ಗ್ರಾ.ಪಂ. ಸರ್ಕಾರದ ಮಾನದಂಡಕ್ಕೆ ಅನುಗುಣವಾಗಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನವಾಗಿದೆ. ಪಂಚಾಯಿತಿ ಇನ್ನೂ ಉತ್ತಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಇದು ಪ್ರೇರಕವಾಗಿದ್ದು ಹೆಚ್ಚಿನ ಜವಾಬ್ದಾರಿ ನೀಡಿದೆ ಎಂದು ನರೇಗಾ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಆಯ್ಕೆಗೆ ಕಾರಣ ಇದು: ಕಡತಗಳ ನಿರ್ವಹಣೆ, ಕರವಸೂಲಿ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ, ಸಿ.ಸಿ ರಸ್ತೆ, ಚರಂಡಿ, ನಾಲಾ-ಕೆರೆ ಹೂಳು ತೆರವು, ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಮಾದರಿ ಇಕೋ ಪಾರ್ಕ್, ಸಕಾಲಕ್ಕೆ ಕುಡಿವ ನೀರು ಪೂರೈಕೆ , ಗ್ರಾಮ ಆರೋಗ್ಯ ಯೋಜನೆ ಅಡಿ ಉಚಿತ ಆರೋಗ್ಯ ತಪಾಸಣೆ, ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಡಿಜಿಟಲ್ ಗ್ರಂಥಾಲಯ, ನಿಯಮಿತವಾಗಿ ಗ್ರಾಮ ಸಭೆ, ವಾರ್ಡ್ ಸಭೆಗಳನ್ನು ನಡೆಸಿ ದೂರದೃಷ್ಟಿ ಯೋಜನೆಯನ್ನು ರೂಪಿಸಿದೆ.

ಗಾಂಧಿ ಗ್ರಾಮ ಪುರಸ್ಕಾರದಿಂದ ನಮ್ಮ ಉತ್ಸಾಹ ಹೆಚ್ಚಿದೆ. ಹುಲಸೂರನ್ನೂ ಸಂಪೂರ್ಣ ಸ್ವಚ್ಛ ಗ್ರಾಮವನ್ನಾಗಿ ರೂಪಿಸುವ ಗುರಿ ಇದೆ.
ನೀಲಮ್ಮ ಚಳಗೇರಿ ಮಂಗಳೂರು ಪಿಡಿಒ
ನರೇಗಾದಡಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ. ಗಾಂಧಿ ಪುರಸ್ಕಾರ ದೊರೆತಿರುವುದು ಸಂತಸದ ತಂದಿದೆ.
ಸಕ್ರಪ್ಪ ಚಿನ್ನೂರ ಗ್ರಾ.ಪಂ. ಅಧ್ಯಕ್ಷ ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT