ಸೋಮವಾರ, ಆಗಸ್ಟ್ 2, 2021
26 °C

ವಾಟ್ಸ್‌ಆ್ಯಪ್‌, ಮಿಸ್‌ಕಾಲ್‌ನಿಂದ ಗ್ಯಾಸ್‌ ಬುಕಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಾಟ್ಸ್‌ಆ್ಯಪ್‌ ಮತ್ತು ಮಿಸ್‌ ಕಾಲ್‌ ಮೂಲಕ ಗ್ಯಾಸ್‌ ಬುಕ್ಕಿಂಗ್‌ ಸೌಲಭ್ಯವನ್ನು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಭಾರತ್‌ ಗ್ಯಾಸ್‌) ಆರಂಭಿಸಿದೆ.

ಬಿಪಿಸಿಎಲ್‌ನ ಸ್ಮಾರ್ಟ್ ಲೈನ್‌ ಸಂಖ್ಯೆ 1800224344 ಸಂಖ್ಯೆಗೆ ಇಂಗ್ಲಿಷ್‌ ನಲ್ಲಿ ತಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ಗ್ರಾಹಕರು Hi ಎಂದು ಟೈಪ್‌ ಮಾಡಿ, ವಾಟ್ಸ್‌ಆ್ಯಪ್‌ ಕಳುಹಿಸಬಹುದು. ಇಲ್ಲವೇ ನೋಂದಾಯಿತ ಮೊಬೈಲ್‌ನಿಂದ ಮೊ.ಸಂ. 77109555555 ಇಲ್ಲಿ ಮಿಸ್‌ಕಾಲ್‌ ನೀಡುವ ಮೂಲಕ ಗ್ಯಾಸ್ ಬುಕ್‌ ಮಾಡಬಹುದು.

ಗ್ರಾಹಕರು ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಬಹುದಾಗಿದ್ದು, ಭಾರತ್ ಗ್ಯಾಸ್ ಮೊಬೈಲ್‌ ಆ್ಯಪ್‌, ಅಮೇಝಾನ್‌, ಗೂಗಲ್‌ ಪೇ ಅಥವಾ ಪೇಟಿಯಂನಲ್ಲಿ ಪಾವತಿಸಬಹುದು. ಅಮೇಝಾನ್‌ನಲ್ಲಿ ಪಾವತಿಸಿದಲ್ಲಿ ₹25 ಕ್ಯಾಶ್‌ಬಾಕ್‌ ಬರಲಿದೆ. ಆನ್‌ಲೈನ್‌ ಪಾವತಿ ಮೂಲಕ ಡೆಲಿವರಿ ಸಮಯದಲ್ಲಿ ಹೆಚ್ಚುವರಿ ಹಣ ಸಂಗ್ರಹವನ್ನೂ ತಪ್ಪಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.