ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯ ಐಎಫ್‌ಡಬ್ಲ್ಯು ಸಂಸ್ಥೆ: ಪ್ರೊ.ಅಂಜನಾದೇವಿ ನಿರ್ದೇಶಕಿ

Published 8 ಜನವರಿ 2024, 20:16 IST
Last Updated 8 ಜನವರಿ 2024, 20:16 IST
ಅಕ್ಷರ ಗಾತ್ರ

ಮುಡಿಪು: ಜರ್ಮನಿಯ ಡ್ರಸ್ಡೆನ್‌ನ ‘ಇನ್‌ಸ್ಟಿಟ್ಯೂಟ್‌ ಆಫ್ ಮೆಟೀರಿಯಲ್ಸ್ ಕೆಮಿಸ್ಟ್ರಿ’ಯ ನಿರ್ದೇಶಕರಾಗಿ ಮಂಗಳೂರು ಮೂಲದ ಪ್ರೊ. ಅಂಜನಾದೇವಿ ನೇಮಕಗೊಂಡಿದ್ದಾರೆ.

ಹಿರಿಯ ಡಾಕ್ಟೋರಲ್ ವಿದ್ಯಾರ್ಥಿಗಳಲ್ಲಿ ಜರ್ಮನಿಯಲ್ಲಿ ಇಂಥ ಉನ್ನತ ಹುದ್ದೆಯನ್ನು ಅಲಂಕರಿಸಿರುವವರಲ್ಲಿ ಪ್ರೊ.ಅಂಜನಾದೇವಿ ಅವರು ಮೊದಲನೆಯವರಾಗಿದ್ದಾರೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಶ್ಲಾಘಿಸಿದೆ.

ಪ್ರೊ.ಅಂಜನಾದೇವಿ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಸ್ತು ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಥಮ ರ್‍ಯಾಂಕ್‌ ನೊಂದಿಗೆ ತೇರ್ಗಡೆ ಯಾಗಿದ್ದರು. ‘ಗೇಟ್’ ಪರೀಕ್ಷೆಯಲ್ಲೂ ಉತ್ತೀರ್ಣರಾ ಗಿದ್ದರು.

ಬೋಷೆಮ್‌ರೂರ್ ವಿಶ್ವವಿದ್ಯಾಲಯದಲ್ಲಿ ಅಲೆಕ್ಸಾಂಡರ್ ವಾನ್ ಹ್ಯೂಮ್ಬೋಲ್ಟ್ ಸ್ಕಾಲರ್‌ಶಿಪ್‌ನೊಂದಿಗೆ ಉನ್ನತ ಡಾಕ್ಟೋರಲ್ ಸಂಶೋಧನೆ ನಡೆಸಿ 2002ರಿಂದ ಅಲ್ಲಿಯೇ ಪ್ರಾಧ್ಯಾಪಕರಾಗಿದ್ದಾರೆ. 

ಇವರು ಮಂಗಳೂರಿನ ದಿ.ಕೆ.ಪಿ.ಭಾಸ್ಕರ ಮತ್ತು ಎಂ.ವಜ್ರಾಕ್ಷಿ ಅವರ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT