ಮಂಗಳವಾರ, ಜನವರಿ 21, 2020
19 °C

ಕಾಲು ಕಳೆದುಕೊಂಡ ಯುವಕನ ಬಾಳಸಂಗಾತಿಯಾದ ಸಂಜೀವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಕಾಯರ್ತಡ್ಕದಲ್ಲಿರುವ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಸ್ಥಳೀಯ ನೊಂದ ಯುವಕ ಚಂದ್ರಶೇಖರನ ಬಾಳ ಸಂಗಾತಿಯಾಗಿ ಸಂಜೀವಿನಿ ಮಾನವೀಯತೆ ಮೆರೆದಳು.

ಸಂಜೀವಿನಿ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ನಿವಾಸಿ. ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ ಕಾಯರ್ತಡ್ಕದ ನಿವಾಸಿ ಚಂದ್ರಶೇಖರ. ಮದುವೆ ಬಗ್ಗೆ ಮಾತುಕತೆ ನಡೆಸಿದ್ದರೂ ಚಂದ್ರಶೇಖರನ ಮನೆಯವರು ಬಡವರಾದುರಿಂದ ಯುವತಿಯ ಮನೆಯವರು ಮದುವೆಗೆ ಒಪ್ಪಲಿಲ್ಲ.  ಸಂಜೀವಿನಿ ತನ್ನ ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದಳು. ಸ್ಥಳೀಯ ಹಿಂದೂ ಸಂಘಟನೆಗಳ ಸಹಕಾರ ಮತ್ತು ಬೆಂಬಲದಿಂದ ಮದುವೆ ಸುಗಮವಾಗಿ ನಡೆಯಿತು.

2018 ರಲ್ಲಿ ನಡೆದ ಅಪಘಾತದಲ್ಲಿ ಚಂದ್ರಶೇಖರ ಕಾಲು ಕಳೆದುಕೊಂಡಿದ್ದರು. ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಚಂದ್ರಶೇಖರ್‌ ಅವರಿಗೆ ಕೃತಕ ಕಾಲು ಜೋಡಣೆ ಹಾಗೂ ಮದುವೆಗೆ ₹50,000 ನೆರವು ನೀಡಿದೆ.

ಶಾಸಕ ಹರೀಶ್ ಪೂಂಜ ಹಾಗೂ ಪ್ರಮುಖರಾದ ಉಜಿರೆಯ ರಮೇಶ ಪ್ರಭು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ಸಂಜೀವಿನಿಯ ಮಾನವೀಯತೆಗೆ ಅಭಿನಂದಿಸಿದ್ದಾರೆ. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಹಿಂದೂ ಸಮಾವೇಶದ ಮೂಲಕ ಹಿಂದೂಗಳು ಸಂಘಟಿತರಾಗಿ ಸಂಸ್ಕಾರಯುತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ವಕೀಲರಾದ ಸಹನಾ ಕುಂದರ್ ಸೂಡಾ,  ಡಾ. ಎಂ.ಎಂ. ದಯಾಕರ್, ಸುಬ್ರಹ್ಮಣ್ಯ ಕುಮಾರ್ ಮತ್ತು ಭಾಸ್ಕರ ಧರ್ಮಸ್ಥಳ ಶುಭ ಹಾರೈಸಿದರು. ಅಶೋಕ ಗೌಡ ಸ್ವಾಗತಿಸಿದರು. ಉಮೇಶ್ ಧನ್ಯವಾದವಿತ್ತರು. ನವೀನ್ ನೆರಿಯಾ ಮತ್ತು ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು