ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಟ್ಲ: ಮನೆಯ ಬಾಗಿಲು ಮುರಿದು ಚಿನ್ನಾಭರಣ, ವಿದೇಶಿ ಕರೆನ್ಸಿ ಕಳವು 

Published 28 ಜೂನ್ 2024, 13:54 IST
Last Updated 28 ಜೂನ್ 2024, 13:54 IST
ಅಕ್ಷರ ಗಾತ್ರ

ವಿಟ್ಲ: ಬಾಗಿಲನ್ನು ಮುರಿದ ಒಳ ನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿದ್ದ ಬೀರುವಿನ ಬಾಗಿಲನ್ನು ಆಯುಧದಿಂದ ಮೀಟಿ, ಅದರೊಳಗಿದ್ದ ₹2.20 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕಳವು ಮಾಡಿದ ಘಟನೆ ಬಂಟ್ವಾಳ ತಾಲ್ಲೂಕು ವಿಟ್ಲ ಸಮೀಪದ ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿ ನಡೆದಿದೆ.

ಜೀನತ್ ಎಂಬುವರ ದೂರಿನಂತೆ ರಾತ್ರಿಯಿಂದ ಬೆಳಗ್ಗಿನ ಅವಧಿಯಲ್ಲಿ ಘಟನೆ ನಡೆದಿದೆ. ಬೀರುವಿನಲ್ಲಿದ್ದ 52 ಗ್ರಾಂ ಚಿನ್ನದ ಆಭರಣಗಳನ್ನು ಹಾಗೂ ವಿದೇಶದಿಂದ ಜೀನತ್ ಎಂಬುವರ ಪುತ್ರ ತಂದು ಬೀರುವಿನಲ್ಲಿ ಇರಿಸಿದ್ದ ₹ 5000 ಸೌದಿಯ ರಿಯಲ್ಸ್ ಕರೆನ್ಸಿ (ಭಾರತದ ಮೌಲ್ಯ ₹1.15 ಲಕ್ಷ)ಯನ್ನು ಕಳವು ಮಾಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT